ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

Update: 2023-08-26 17:44 GMT

ದಾವಣಗೆರೆ. ಆ.26: ಮುಖ್ಯಮಂತ್ರಿ  ಸಿದ್ದರಾಮಯ್ಯ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌ ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇದೀಗ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸ್ವಪಕ್ಷ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಬಿಜೆಪಿ ನಾವಿಕನಿಲ್ಲದ ಹಡಗಾಗಿದೆ. ಇಷ್ಟು ದಿನವಾದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಯಡಿಯೂರಪ್ಪ ನವರನ್ನು ಕಡೆಗಣೆಸಿದ್ದು ಅದರ ಶಾಪದಿಂದಲೇ ಬಿಜೆಪಿಗೆ ಈ ಸ್ಥಿತಿ ಬಂದಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼʼಕರ್ನಾಟಕ ರಾಜಕಾರಣವನ್ನು ಎಲ್ಲೋ ಕೂತು ಯಾರೋ ಕಂಟ್ರೋಲ್ ಮಾಡ್ತಾ ಇದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ವರ್ಚಸ್ಸು ಇರುವ ನಾಯಕರು ಬೇಕು. ಯಡಿಯೂರಪ್ಪ ನವರ ನಾಯಕತ್ವದಿಂದ ಮಾತ್ರ ಲೋಕಸಭಾ ಚುನಾವಣೆ ಗೆಲ್ಲಲು ಸಾಧ್ಯ. ಯಡಿಯೂರಪ್ಪ ನವರನ್ನು ಕಡೆಗಣಿಸಿ ಚುನಾವಣೆ ಗೆ ಹೋದರೆ ಬಹಳ ಕಷ್ಟ ಇದೆʼʼ ಎಂದು ಹೇಳಿದರು. 

 ʼʼಸಚಿವ ಸ್ಥಾನವನ್ನು ನಮ್ಮವರೇ ತಪ್ಪಿಸಿದ್ದಾರೆʼʼ

ʼʼನನಗೆ ಸಿಗುವ ಸಚಿವ ಸ್ಥಾನವನ್ನು ನಮ್ಮವರೇ ತಪ್ಪಿಸಿದ್ದಾರೆ‌. ನನಗೆ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಗೆ ಸಚಿವ ಸ್ಥಾನ ತಪ್ಪಿಸಿದ್ದರು. ಅದರ ಬಗ್ಗೆ ನನಗೆ ಬಹಳ ನೋವು ಇದೆʼʼ ಎಂದ ಎಂಪಿ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News