ಮೂಡಿಗೆರೆ: ರಸ್ತೆಯಲ್ಲಿ ಉರುಳಿಬಿದ್ದ ಟಿಟಿ ವಾಹನ: ಹಲವರಿಗೆ ಗಾಯ
Update: 2023-10-16 07:38 GMT
ಮೂಡಿಗೆರೆ, ಅ.16: ಟಿಟಿ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ಕೊಟ್ಟಿಗೆಹಾರ ಸಮೀಪ ದೇವನ ಗುಲ್ ಬಳಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಟಿಟಿ ವಾಹನದಲ್ಲಿದ್ದ ಕೆಲವರಿಗೆ ಗಂಭೀರ ಗಾಯಾಗಳಾಗಿದ್ದು, ಅವರನ್ನು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ
ದೇವಳ ದರ್ಶನಕ್ಕೆ ಹೊರಟಿದ್ದ ಶಿರಸಿ ಮೂಲದ 15 ಮಂದಿ ಧರ್ಮಸ್ಥಳದಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೊರಟಿದ್ದರು. ಅವರು ಸಂಚರಿಸುತ್ತಿದ್ದ ವಾಹನ ಕೊಟ್ಟಿಗೆಹಾರ ಸಮೀಪ ದೇವನ ಗುಲ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.
ಘಟನಾ ಸ್ಥಳಕ್ಕೆ ಬಣಕಲ್ ಠಾಣಾ ಪೊಲೀಸರು ಆಗಮಿಸಿದ್ದಾರೆ.