ಮಡಿಕೇರಿ | ಪುತ್ರನಿಂದಲೇ ತಾಯಿಯ ಕೊಲೆ: ಆರೋಪಿಯ ಬಂಧನ
Update: 2023-07-13 18:20 GMT
ಮಡಿಕೇರಿ, ಜು.13: ಕುಡಿದ ಅಮಲಿನಲ್ಲಿ ಪುತ್ರನೇ ತಾಯಿಯನ್ನು ಹತ್ಯೆ ಮಾಡಿರುವ ಆರೋಪದಡಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಲಲಿತಾ (45) ಎಂಬವರು ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಟ್ಟೆಪುರ ಹಾಡಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಜೇನುಕುರುಬರ ರಾಜಶೇಖರ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.