ದೊಡ್ಡಬಳ್ಳಾಪುರ: ಅಂತ್ಯ ಸಂಸ್ಕಾರಕ್ಕೆ ಜಾಗ ತಿಳಿಯದೆ ಮೋರಿ ಬಳಿ ಮಗುವಿನ ಮೃತದೇಹ ಇಟ್ಟಿದ್ದ ಹೆತ್ತವರು

Update: 2023-12-06 07:15 GMT

ದೊಡ್ಡಬಳ್ಳಾಪುರ, ಡಿ.6: ಅನಾರೋಗ್ಯದಿಂದ ಮೃತಪಟ್ಟ ಮಗುವಿನ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಜಾಗ ತಿಳಿಯದ ಕಾರಣ ಹೆತ್ತವರು ಮೋರಿಯ ಬಳಿ ತೊರೆದು ಹೋದ ಘಟನೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಸುಮಾರು ಒಂದು ವರ್ಷದ ಮಗುವಿನ ಮೃತದೇಹ ಮೋರಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಮಗುವಿನ ಪೋಷಕರನ್ನು ಹುಡುಕುವಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ಮಗುವನ್ನು ಬಿಹಾರ ಮೂಲದ ಪ್ರಮೇಶ್ ಕುಮಾರ್ ಮತ್ತು ವಿಭಾ ಕುಮಾರಿ ಎಂಬ ಕೂಲಿ ಕಾರ್ಮಿಕ ದಂಪತಿಯ ಪುತ್ರಿ ರುಚಿ ಕುಮಾರಿ ಎಂದು ಗುರುತಿಸಲಾಗಿದೆ. ವಾರದ ಹಿಂದೆ ಬಿಹಾರದಿಂದ ಕೂಲಿ ಕೆಲಸ ಹುಡುಕಿಕೊಂಡು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದ ಈ ದಂಪತಿಯ ಪುತ್ರಿ ರುಚಿ ಕುಮಾರಿ ಉಸಿರಾಟ ಸಮಸ್ಯೆಯಿಂದ ರವಿವಾರ ಮೃತಪಟ್ಟಿದ್ದಳು. ಊರಿಗೆ ಹೊಸಬರಾದ ಕಾರಣ ಮಗುವಿನ ಮೃತದೇಹವನ್ನು ಎಲ್ಲಿ ಸಂಸ್ಕಾರ ಮಾಡಬೇಕು ಎಂದು ತೋಚದೆ ಮೋರಿಯ ಅಂಚಿನಲ್ಲಿ ಶಾಲು ಹಾಸಿ ಮಲಗಿಸಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News