ʼಗ್ಯಾರಂಟಿʼ ಹೆಸರಿನಲ್ಲಿ ಕಾಂಗ್ರೆಸ್ ಸರಕಾರದಿಂದ ಹಗಲು ದರೋಡೆ : ನಿಖಿಲ್ ಕುಮಾರಸ್ವಾಮಿ

Update: 2024-10-06 14:11 GMT

ಬೆಂಗಳೂರು: ‘ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಲು ಚನ್ನಪಟ್ಟಣ ಕ್ಷೇತ್ರದ ಜನತೆ ಕಾರಣ. ಚನ್ನಪಟ್ಟಣ ತಾಲೂಕಿಗೆ ಒಂದೂವರೆ ಸಾವಿರ ಕೋಟಿ ರೂ.ಗಳಷ್ಟು ಅನುದಾನ ತಂದಿದ್ದರು. ಇದನ್ನು ತಿರುಚಲು ಸಾಧ್ಯವಿಲ್ಲ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಕೋಡಂಬಳ್ಳಿ, ಅಕ್ಕೂರು, ಮಳೂರು, ಬೇವೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ತಾಲೂಕು ಎಲ್ಲಿದೆ ಎಂದೇ ಗೊತ್ತಿರಲಿಲ್ಲ. ಇದೀಗ ಉಪಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣಕ್ಕೆ ನಿರಂತರ ಪ್ರವಾಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಕುಮಾರಸ್ವಾಮಿ 1500 ಕೋಟಿ ರೂ.ಅನುದಾನ ತಂದ ಬಗ್ಗೆ ಎಲ್ಲೂ ಜಾಹಿರಾತು ಹಾಕಿಕೊಳ್ಳಲಿಲ್ಲ. ಆದರೆ, ಉಪ ಮುಖ್ಯಮಂತ್ರಿಗೆ ಇದೀಗ ಚನ್ನಪಟ್ಟಣದ ಮೇಲೆ ಮಮಕಾರ ಬಂದಿದೆ ಎಂದು ಟೀಕಿಸಿದ ಅವರು, ಮಂಡ್ಯ ಜಿಲ್ಲೆಯ ಜನರ ಆಶಿರ್ವಾದದಿಂದ ಕುಮಾರಸ್ವಾಮಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ ಎಂದರು.

ಹಗಲು ದರೋಡೆ ಮಾಡುತ್ತಿದೆ: 

ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಹಗಲು ದರೋಡೆ ಮಾಡುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ 187 ಕೋಟಿ ರೂ.ಹಣವನ್ನ ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದೆ. ಇದನ್ನು ಸ್ವತಃ ಸಿಎಂ ಅವರೇ ಇದನ್ನು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಜನತೆ ಇಂತಹ ಭ್ರಷ್ಟ ಸರಕಾರ ನೋಡಿಲ್ಲ. ಕೇವಲ ಒಂದುವರೆ ವರ್ಷದಲ್ಲಿ ಸರಕಾರ ನಡವಳಿಕೆ ಗೊತ್ತಾಗುತ್ತ್ತಿದೆ ಎಂದು ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News