ಆನ್‌ ಲೈನ್‌ ವಂಚನೆ: 99 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್‌

Update: 2023-09-23 11:25 GMT

ಶಿವಮೊಗ್ಗ, ಸೆ.23: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಶಿವಮೊಗ್ಗ ಜಿಲ್ಲೆಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 99 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ (ಹೆಸರು ಗೌಪ್ಯ) ಅವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಸ್ವಪ್ನಾ ಎಂಬ ಹೆಸರಿನ ಯುವತಿಯ ಪರಿಚಯವಾಗಿದೆ. ಇಬ್ಬರು ವಾಟ್ಸಪ್ ಮೂಲಕ ಚಾಟಿಂಟ್ ಮಾಡಿದ್ದಾರೆ. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ಸ್ಟ್ರೀಟ್‌ನಲ್ಲಿ ಮಾರ್ಕೆಟ್ ಅನಾಲಿಸ್ಟ್ ಎಂದು ತಿಳಿಸಿದ್ದಳು. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿದ್ದಳು ಎಂದು ಆರೋಪಿಸಲಾಗಿದೆ.

ಹೆಚ್ಚು ಸಂಪಾದನೆ ಆಸೆ ಮೂಡಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಒಂದು ಲಿಂಕ್ ಕಳುಹಿಸಿದ್ದಳು. ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಕಸ್ಟಮರ್ ಸಪೋರ್ಟ್ ನಂಬರ್ ಎಂದು ದೂರವಾಣಿ ಸಂಖ್ಯೆಯನ್ನು ನೀಡಿದ್ದಳು. ಕಸ್ಟಮರ್ ಸಪೋರ್ಟ್ ನಂಬರ್‌ಗೆ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯು ಹಣ ಹೂಡಿಕೆ ಕುರಿತು ತಿಳಿಸಿದ್ದ. ಅದರಂತೆ ಸಾಫ್ಟ್‌ವೇರ್ ಇಂಜಿನಿಯರ್, ವಿವಿಧ ಬ್ಯಾಂಕ್ ಖಾತೆಯಿಂದ 99,03,000 ರೂ. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿದ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News