ಕಲಬುರಗಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಸಂವಾದ ಕಾರ್ಯಕ್ರಮಕ್ಕೆ ವಿರೋಧ, ಪ್ರತಿಭಟನೆ: ಸಂಘಪರಿವಾರದ ಕಾರ್ಯಕರ್ತರು ಪೊಲೀಸ್ ವಶಕ್ಕೆ ‌

Update: 2023-09-10 15:33 GMT

ಕಲಬುರಗಿ: ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಅನುಸಂದಾನ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿದ ಬಹುಭಾಷಾ ಖ್ಯಾತ ನಟ ಪ್ರಕಾಶ್ ರಾಜ್ ಆಗಮನಕ್ಕೆ ವಿರೋಧಿಸಿ ‌ʻಹಿಂದೂ ಜಾಗೃತ ಸೇನೆʻ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡಿದ್ದಾರೆ. 

ಕಲಬುರಗಿ ಆರ್ಟ್ ಥಿಯೇಟರ್, ಅಂತರಂಗ ಸಾಂಕೃತಿಕ ಸೇವಾ ಸಂಸ್ಥೆ, ರಂಗ ವೃತ್ತಿ ಕಲಾ ತಂಡ ಹಾಗೂ ಸೂರ್ಯನಗರ ಸಾಂಸ್ಕೃತಿಕ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಾಂಸ್ಕೃತಿಕ ಅನುಸಂದಾನ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ.

ಕಲಬುಗರಿ ನಗರಕ್ಕೆ ರಾಜ್‌ ಗೆ ನಿರ್ಬಂಧ ಹೇರುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಕಪ್ಪು ಬಟ್ಟೆ ತೋರಿಸಿ ನಗರದ ಜಗತ್ ವೃತ್ತದಿಂದ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಗತ್ ವೃತ್ತದಲ್ಲೇ ಪ್ರತಿಭಟನಾಕಾರರನ್ನು ತಡೆದಿದ್ದು, ಲಕ್ಷ್ಮಿಕಾಂತ್ ಸ್ವಾದಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಾಡುತ್ತಿದ್ದರು. ʻಗಾಯಾಳು ನಾಟಕʻ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರುವ ಪ್ರಕಾಶ್ ರಾಜ್‌ ಅವರಿಗೆ ವಿರೋಧಿಸಲಾಗಿತ್ತು. ಕೋಮು ಭಾವನೆಗೆ ಧಕ್ಕೆ ತರುವಂತೆ ಪ್ರಚೋದನಾತ್ಮಕ ಪ್ರಕಾಶ್ ರಾಜ್ ರೈಗೆ ನಿರ್ಭಂದ ಹೇರುವಂತೆ ನಿನ್ನೆ ಮನವಿ ಸಲ್ಲಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News