ʼಜನರ ಮಾತು ಕೇಳುತ್ತಿಲ್ಲ...ʼ: ಪ್ರಧಾನಿ ಮೋದಿಯವರ ʼಮನ್ ಕೀ ಬಾತ್’ ವಿರೋಧಿಸಿ ರೇಡಿಯೋ ಒಡೆದು ಆಕ್ರೋಶ‌

Update: 2023-10-22 14:24 GMT

ರಾಯಚೂರು, ಅ. 22: ಹತ್ತು ವರ್ಷದಿಂದ ಪ್ರಧಾನಿ ಮೋದಿ ಅವರು ಯಾವುದೇ ಅಭಿವೃದ್ಧಿ ಮಾಡದೆ, ಬಡಜನರ ಸಂಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಜಿಲ್ಲಾ ಘಟಕದ ಸದಸ್ಯರು ಮನ್ ಕೀ ಬಾತ್‍ನ ರೇಡಿಯೊ ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು ರೇಡಿಯೋ ಒಡೆಯುವ ಮೂಲಕ ಮನ್ ಕೀ ಬಾತ್ ಪ್ರಸಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದರು.

ಕೇಂದ್ರ ಸರಕಾರ 9 ವರ್ಷಗಳಿಂದ ಮನ್ ಕೀ ಬಾತ್ ಹೇಳುತ್ತಿದ್ದು, ಜನರ ಮಾತು ಕೇಳುತ್ತಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಮಾಡದೇ ದಿನಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡದೇ ಜನ ವಿರೋಧಿನೀತಿ ಅನುಸರಿಸುತ್ತಿದೆ. ದೇಶದ ನಾಗರಿಕರ ಸಮಸ್ಯೆ ಆಲಿಸದೇ ಅಂತರರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆ ಕಣ್ಣೀರು ಸುರಿಸುತ್ತಿದೆ. ದೇಶದ ನಾಗರಿಕರ ಜೀವಕ್ಕಿಂತ ಪದ ದೇಶದ ಚಿಂತೆ ಪ್ರಧಾನಿ ಮೋದಿಗೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನಾನಿರತ ಸಿಪಿಐಎಲ್‍ರೆಡ್ ಸ್ಟಾರ್ ರಾಜ್ಯ ಸಮಿತಿಯ ಸದಸ್ಯ ಜಿ.ಅಮರೇಶ ಮಾತನಾಡಿ, ಪ್ರಧಾನಿ ಮೋದಿ ಕೇಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 150 ಕೋಟಿ ಬದುಕು ದುಸ್ತರವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡದೇ ಕೇವಲ ಮನ್ ಕಿಬಾತ್ ಹೇಳುತ್ತಿದೆ ನಮಗೆ ಮನ್ ಕಿಬಾತ್ ಬೇಕಾಗಿಲ್ಲ. ಕಾಮ್ ಕಿ ಬಾತ್( ಕೆಲಸದ ಮಾತು) ಬೇಕು. ಯುವಕರಿಗೆ ಉದ್ಯೋಗ ಬೇಕು.15 ಲಕ್ಷ ಹಾಕುತ್ತೆನೆಂದು ಹೇಳಿ ಒಂದು ನಯಾ ಪೈಸಾನೂ ಹಾಕಿಲ್ಲ. ಕೇವಲ ಸುಳ್ಳುನ ಭರವಸೆ ನೀಡುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಆರ್.ಹುಚ್ಚ ರೆಡ್ಡಿ, ಪಕ್ಷದ ಪದಾಧಿಕಾರಿಗಳಾದ ಅಝೀಝ್ ಝಾಗೀರದಾರ್, ಮಲ್ಲಯ್ಯ ಕಟ್ಟಿಮನಿ, ಆದೇಶ ನಗನೂರು, ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ನಿಸರ್ಗ, ಹನೀಫ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News