CWMA, CWRC ರದ್ದು ಪಡಿಸುವಂತೆ ‌ಸುಪ್ರೀಮ್ ಕೊರ್ಟ್‌ ಗೆ ಮನವಿ ಸಲ್ಲಿಸಿ: ರಾಜ್ಯ ಸರಕಾರಕ್ಕೆ ಟಿ. ಎ.ಶರವಣ ಒತ್ತಾಯ

Update: 2023-10-12 08:56 GMT

ಬೆಂಗಳೂರು: ʼʼಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಆಕ್ರಮಣ ಕಾರಿ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ಕೈ ಗೊಳ್ಳುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಪಡಿಸುವಂತೆ ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಮತ್ತು ಸುಪ್ರೀಮ್ ಕೊರ್ಟ್‌ ಗೆ ಮನವಿ ಸಲ್ಲಿಸ ಬೇಕುʼʼ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಟಿ. ಎ.ಶರವಣ ಒತ್ತಾಯಿಸಿದ್ದಾರೆ. 

ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ʼʼಪ್ರತಿ ಸಭೆಯಲ್ಲೂ, ಪ್ರತಿ ಬಾರಿಯೂ ಕರ್ನಾಟಕದ ವಿರುದ್ಧವೇ ಸೂಚನೆ, ಶಿಫಾರಸು ನೀಡುತ್ತಿರುವ ಈ ಸಮಿತಿಗಳು ತಾರತಮ್ಯ ಮಾಡುತ್ತಿವೆ. ಆದ್ದರಿಂದ ಈ ಸಮಿತಿಗಳ ಬಣ್ಣ ಬಯಲು ಮಾಡಲಿʼʼ ಎಂದು ಆಗ್ರಹಿಸಿದ್ದಾರೆ. 

ರಾಜ್ಯ ಸರಕಾರರದ ವೈಫಲ್ಯತೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು,  ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರವೇ ರಾಜ್ಯದ ರೈತರಿಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ʼʼIndia ಒಕ್ಕೂಟದ ಭಾಗವಾಗಿರುವ ತಮಿಳುನಾಡು ಸಿಎಂ ಮನವೊಲಿಸಲು, ಕೃಪೆಗೆ ಪಾತ್ರರಾಗಲು ಕರ್ನಾಟಕದ ಕಾಂಗ್ರೆಸ್ ಸರಕಾರ ನೀರು ಬಿಟ್ಟೂ ಬಿಟ್ಟೂ ರೈತರ ಹಿತಾಸಕ್ತಿ ಬಲಿ ಕೊಟ್ಟಿದ್ದಾಯ್ತು.ಈಗಲಾದರೂ ನೀರು ಬಿಡುವುದಿಲ್ಲ ಎನ್ನುವ ಧೈರ್ಯ, ಸ್ಥೈರ್ಯ ತೋರಬೇಕು. ಇಂಥ ತಾಕತ್ತು ಈ ಸರಕಾರಕ್ಕೆ ಇದೆಯೇ?ʼʼ ಎಂದು ಅವರು ಪ್ರಶ್ನಿಸಿದ್ದಾರೆ. 

ʼಸುಪ್ರೀಂ ಕೋರ್ಟ್ ನಿಂದ ನೇಮಕ ವಾಗುವ ಸ್ವತಂತ್ರ ತಜ್ಞರ ನಿಯೋಗ ಕರ್ನಾಟಕದ ಮತ್ತು ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ನೀಡಲಿ. ಅದರ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಲಿʼ ಎಂದು ಅವರು ಆಗ್ರಹಿಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News