ಹಿಮಾಲಯ ಕಂಪೆನಿ ವಿರುದ್ಧ ಪೋಸ್ಟ್: ‘The Liver Doctor’ X ಖಾತೆ ಅಮಾನತಿಗೆ ಕೋರ್ಟ್ ಆದೇಶ

Update: 2023-09-28 16:13 GMT
Photo- Twitter

ಬೆಂಗಳೂರು, ಸೆ.28: ಹಿಮಾಲಯ ವೆಲ್ನೆಸ್ ಕಂಪೆನಿಯ ಉತ್ಪನ್ನಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಪಟಾಲಜಿಸ್ಟ್ ಡಾ.ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ‘The Liver Doctor’ ಖಾತೆಯನ್ನು ಅಮಾನತುಗೊಳಿಸುವಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು ಸಾಮಾಜಿಕ ಮಾಧ್ಯಮ ಕಂಪೆನಿ ‘X’ಗೆ ಹೇಳಿದೆ.

ಎಕ್ಸ್ನಲ್ಲಿ The Liver Doctor’’ ಎಂಬ ಖಾತೆಯಿಂದ ಡಾ.ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ತಮ್ಮ ಕಂಪೆನಿಯ ವಿರುದ್ಧ ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಹಿಮಾಲಯ ವೆಲ್ನೆಸ್ ಕಂಪೆನಿಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ಕೋರ್ಟ್, ಈ ಆದೇಶ ನೀಡಿದೆ. ಅಲ್ಲದೆ, ಡಾ.ಫಿಲಿಪ್ಸ್ ಅವರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿದೆ.

ಡಾ.ಫಿಲಿಪ್ಸ್ ಅವರು ತಮ್ಮ ಕಂಪೆನಿಯ ಉತ್ಪನ್ನಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದು, ಇದು ವ್ಯಾಪಾರ ಕುಸಿತಕ್ಕೆ ಕಾರಣವಾಗಿದೆ ಎಂದು ಹಿಮಾಲಯ ವೆಲ್ನೆಸ್ ಕಂಪೆನಿಯು ಅರ್ಜಿಯಲ್ಲಿ ತಿಳಿಸಿದೆ. ಡಾ.ಫಿಲಿಪ್ಸ್ ಅವರು ತಮ್ಮ ನಿಯಮಿತ ಪೋಸ್ಟ್ಗಳ ಮೂಲಕ ಹುಸಿ ವಿಜ್ಞಾನವನ್ನು ಭೇದಿಸಲು ಹೆಸರುವಾಸಿ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News