ರಾಯಚೂರು | ಮುಸ್ಲಿಮ್ ವ್ಯಕ್ತಿಗೆ ದಕ್ಕಿದ ಗ್ರಾ.ಪಂ ಅಧ್ಯಕ್ಷ ಸ್ಥಾನ: 15 ಸದಸ್ಯರ ರಾಜೀನಾಮೆ

Update: 2023-08-05 11:58 GMT

ರಾಯಚೂರು : ಮುಸ್ಲಿಮ್ ವ್ಯಕ್ತಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆನ್ನಲ್ಲೇ 15 ಮಂದಿ ಪಂಚಾಯತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ RH 01 ಗ್ರಾಮ ಪಂಚಾಯತ್ ನಲ್ಲಿ ವರದಿಯಾಗಿದೆ. 

ಒಟ್ಟು 38 ಸದಸ್ಯರನ್ನ ಹೊಂದಿರುವ ಆರ್‌ಹೆಚ್ ಕ್ಯಾಂಪ್ 1 ಪಂಚಾಯತ್ ನಲ್ಲಿ ಓರ್ವ ಮಾತ್ರ ಮುಸ್ಲಿಮ್ ವ್ಯಕ್ತಿ ಸದಸ್ಯರಾಗಿದ್ದಾರೆ. ಅಧ್ಯಕ್ಷ  ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದ್ದರೂ ಏಕೈಕ ಮುಸ್ಲಿಮ್ ಸದಸ್ಯ ರಹಮತ್ ಪಾಷಾಗೆ ( ಕಾಂಗ್ರೆಸ್ ಬೆಂಬಲಿತ)  ಅಧ್ಯಕ್ಷಪಟ್ಟ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿತ 15 ಸದಸ್ಯರು ರಾಜೀನಾಮೆ ನೀಡಿದ್ದಾರೆನ್ನಲಾಗಿದೆ. 

ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಗ್ರಾ.ಪಂ ಸದಸ್ಯರೊಬ್ಬರು, 'ಈ ಪಂಚಾಯತ್ ವ್ಯಾಪ್ತಿಯಲ್ಲಿ ಬಾಂಗ್ಲಾ ವಲಸಿಗರು ವಾಸಿಸುವ ಒಟ್ಟು 6 ಆರ್‌ಹೆಚ್ ಕ್ಯಾಂಪ್‌ಗಳನ್ನು ಒಳಗೊಂಡಿವೆ. ಬಂಗಾಳಿ ಸಮುದಾಯ ಸಮಾನ್ಯ ವರ್ಗಕ್ಕೆ ಬರುತ್ತೆ. ಇದೀಗ  ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದ್ದರೂ ಏಕೈಕ ಮುಸ್ಲಿಮ್ ಸದಸ್ಯ ರಹಮತ್ ಪಾಷಾಗೆ ಅಧ್ಯಕ್ಷಪಟ್ಟ ನೀಡಲಾಗಿದೆ. ಆಗಸ್ಟ್ 3 ರಂದು ನಡೆದ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ರಾಜಕೀಯ ಒತ್ತಡಕ್ಕೆ ಕೆಲವರು ಮನಸ್ಸಿಲ್ಲದೆ ಮತ ಹಾಕಿದ್ದಾರೆ ಎಂದು ಆರೋಪಿಸಿದರು. 

'ಇಲ್ಲಿ ಸುಮಾರು  38 ಸ್ಥಾನಗಳಲ್ಲಿ 30 ಜನ ಸಾಮಾನ್ಯ ವರ್ಗ, 7 ಎಸ್ಸಿಎಸ್ಟಿ ಹಾಗೂ ಹಿಂದುಳಿದವರ್ಗ ಮತ್ತು ಒಬ್ಬರು ಮಾತ್ರ ಅಲ್ಪಸಂಖ್ಯಾತ ಸದಸ್ಯರಿದ್ದಾರೆ. ಹೀಗಾಗಿ 15 ವರ್ಷಗಳ ಬಳಿಕ ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಕೈತಪ್ಪಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು. 


 



 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News