ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತೆರಡು ವಿಡಿಯೋ ಬಿಡುಗಡೆ, ಮುಂದುವರೆದ ಶೋಧ ಕಾರ್ಯ

Update: 2024-03-08 15:00 GMT

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಶಂಕಿತ ಆರೋಪಿ ಪತ್ತೆಗಾಗಿ ಎನ್‍ಐಎ ಅಧಿಕಾರಿಗಳು ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‍ಐಎ ಘೋಷಿಸಿತ್ತು. ಇದೀಗ ಆರೋಪಿ ಬಿಎಂಟಿಸಿ ಬಸ್‍ನಲ್ಲಿ ಹತ್ತಿರುವ ಮತ್ತು ಬಸ್ ನಿಲ್ದಾಣವೊಂದರಲ್ಲಿ ಓಡಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಬಿಎಂಟಿಸಿ ಬಸ್‍ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಆರೋಪಿ ಚಿತ್ರ ಸೆರೆಯಾಗಿದ್ದು, ಪೊಲೀಸರು ವಿಡಿಯೋವನ್ನು ವಿಶ್ಲೇಷಿಸುತ್ತಿದ್ದಾರೆ. ಆರೋಪಿಯು ಮಾಸ್ಕ್ ಇಲ್ಲದೆ ಬಸ್ಸಿನೊಳಗೆ ಕುಳಿತಿರುವುದು ಕೂಡ ಕಂಡುಬಂದಿದೆ.

ವಶಕ್ಕೆ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀ ತನಿಖಾ ದಳ (ಎನ್‍ಐಎ) ಅಧಿಕಾರಿಗಳು ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಕೆಫೆ ಮತ್ತೆ ಆರಂಭ..!

ಶುಕ್ರವಾರ ನಗರದ ಕುಂದಲಹಳ್ಳಿ ಬಳಿಯಿರುವ ರಾಮೇಶ್ವರಂ ಕೆಫೆ ಪುನಾರಂಭವಾಗಿದೆ. ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ. ನಿಮ್ಮೆಲ್ಲರ ಸಹಕಾರದಿಂದ ರಾಮೇಶ್ವರಂ ಕೆಫೆ ಪುನರ್ ಆರಂಭವಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾದ ಭಾರತೀಯರ ಶಕ್ತಿ ಎಂದು ಮಾಲಕರಾದ ದಿವ್ಯಾ, ರಾಘವೇಂದ್ರ ರಾವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News