ಹೆಚ್ಚುವರಿ ಜನದಟ್ಟಣೆ ನಿವಾರಣೆಗಾಗಿ ದಸರಾ ವಿಶೇಷ ರೈಲುಗಳ ಓಡಾಟ; ಇಲ್ಲಿದೆ ಮಾಹಿತಿ

Update: 2023-10-20 05:49 GMT

ಚಿತ್ರ- ಮೈಸೂರು ನಗರದಲ್ಲಿ ದಸರಾ ದೀಪಾಲಂಕಾರ

ಬೆಗಳೂರು, ಅ. 20: ದಸರಾ ಹಬ್ಬದ ಕಾರಣಕ್ಕಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರು ಮತ್ತು ಧಾರವಾಡ ನಡುವೆ ಹಾಗು ಮೈಸೂರು ಮತ್ತು ಬಿಜಾಪುರ ನಡುವೆ ದಸರಾ ವಿಶೇಷ ರೈಲು ಸೇವೆ ಒದಗಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06205 ಮೈಸೂರಿನಿಂದ ಧಾರವಾಡಕ್ಕೆ ಅ.22 ಮತ್ತು 24ರಂದು ಎರಡು ಸಲ ಪ್ರಯಾಣವನ್ನು ಪ್ರಾರಂಭಿಸುತ್ತದೆ. ರೈಲು ಮೈಸೂರಿನಿಂದ 22:35ಕ್ಕೆ ಹೊರಡುತ್ತದೆ ಮತ್ತು ಮರುದಿನ 8ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ ನಿಲುಗಡೆ ನೀಡಲಾಗಿದೆ.

ರೈಲು ನಂ.06206 ಧಾರವಾಡದಿಂದ ಮೈಸೂರಿಗೆ ಪ್ರಯಾಣವನ್ನು ಎರಡು ಸಲ, ಅಂದರೆ, ಅ.23 ಮತ್ತು 25ರಂದು ಪ್ರಾರಂಭಿಸುತ್ತದೆ. ರೈಲು ಧಾರವಾಡದಿಂದ 11:15ಕ್ಕೆ ಹೊರಡುತ್ತದೆ ಮತ್ತು ಅದೇ ದಿನ 21:30ಕ್ಕೆ ಮೈಸೂರು ತಲುಪುತ್ತದೆ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.

 

ರೈಲು ಸಂಖ್ಯೆ 06205 ಮತ್ತು 06206 ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‍ಗಳ ಸಂಯೋಜನೆಯನ್ನು ಹೊಂದಿರುತ್ತದೆ. ರೈಲು ನಂ.06203 ಅ.20ರಂದು ಮೈಸೂರಿನಿಂದ ಬಿಜಾಪುರಕ್ಕೆ ಒಂದು ಬಾರಿಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅದು ಕೆಎಸ್‍ಆರ್ ಬೆಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತದೆ. ರೈಲು ಮೈಸೂರಿನಿಂದ 17:30ಕ್ಕೆ ಹೊರಟು ಮರುದಿನ 10ಕ್ಕೆ ಬಿಜಾಪುರ ತಲುಪಲಿದೆ.

ರೈಲು ನಂ.06204 ಬಿಜಾಪುರದಿಂದ ಮೈಸೂರಿಗೆ ಹಾಸನ ಮಾರ್ಗವಾಗಿ ಅ.21ರಂದು ದಸರಾ ವಿಶೇಷ ಪ್ರಯಾಣವನ್ನು ನಡೆಸಲಿದೆ. ರೈಲು ಬಿಜಾಪುರದಿಂದ 11:45ಕ್ಕೆ ಹೊರಟು ಮರುದಿನ 3ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕಾರಜಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.

ಪ್ರಯಾಣಿಸುವ ಸಾರ್ವಜನಿಕರು ಈ ದಸರಾ ಹಬ್ಬದ ಋತುವಿನಲ್ಲಿ ತೊಂದರೆ ರಹಿತ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳಬಹುದು ಮತ್ತು ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‍ಗಳನ್ನು ತೊಂದರೆ ಮುಕ್ತವಾಗಿ ಖರೀದಿಸಲು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News