ʼಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿʼ; ಡಿಕೆಶಿ ಅವರ ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಬಿಜೆಪಿ ವ್ಯಂಗ್ಯ
ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು, ವಿಪಕ್ಷ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು X ನಲ್ಲಿ ಡಿ.ಕೆ ಶಿವಕುಮಾರ್ ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ವೀಡಿಯೊ ಹಂಚಿಕೊಂಡಿರುವ ಬಿಜೆಪಿ, ʼʼ ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿʼʼ ಎಂದು ಲೇವಡಿ ಮಾಡಿದೆ.
ʼʼಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ಭೀಕರ ಬರವಿದೆ, ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲ, ಸಾಲದ್ದಕ್ಕೆ ನೀವು ನೀರಾವರಿ ಸಚಿವರು!! ಕರ್ನಾಟಕದಲ್ಲಿ ಎಷ್ಟು ಬಾರಿ ಬರ ಪ್ರವಾಸ ಮಾಡಿದ್ದೀರಿ ಸ್ವಾಮಿ..??ʼʼ ಎಂದು ಬಿಜೆಪಿ ಪ್ರಶ್ನಿಸಿದೆ.
ʼʼತೆಲಂಗಾಣ ಕಾಂಗ್ರೆಸ್ಸಿಗರ ಮನೆಯಲ್ಲಿ ಐಟಿ ರೇಡ್ ವೇಳೆ ಹಣ ಸಿಕ್ಕಿ ಬಿದ್ದಿದ್ದರಿಂದ, ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಹಣವನ್ನು ತಲುಪಿಸಲು ಹೋಗಿದ್ದೀರೇನು..?ʼʼ ಎಂದು ಬಿಜೆಪಿ ವ್ಯಂಗ್ಯವಾಡಿದೆ.