ಶಿವಮೊಗ್ಗ | ಅಕ್ರಮವಾಗಿ ಸಾಗುವಾನಿ ಮರ ಸಾಗಣೆ: ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ
ಶಿವಮೊಗ್ಗ: ಸಾಗುವಾನಿ ತುಂಡುಗಳನ್ನು ಕಡಿದು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂದಿಸಿದ್ದು,ಮೂವರು ತಲೆ ಮರೆಸಿಕೊಂಡಿದ್ದಾರೆ.
ಭಾರತಿ ನಗರದ ವಾಸಿಗಳಾದ ಶರತ್ ಹಾಗೂ ಮಂಜುನಾಥ್ ಬಂಧಿತ ಆರೋಪಿತಗಳು ಎಂದು ತಿಳಿದು ಬಂದಿದೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ಹಾಯ್ ಹೊಳೆ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರವನ್ನು ಕೊಯ್ದು ಸಾಗಾಣಿಕೆ ಮಾಡಲು ಯತ್ನಿಸುವಾಗ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ 12 ಸಾಗುವಾನಿ ತುಂಡುಗಳು, ಎರಡು ಮೊಬೈಲ್ ,ಒಂದು ಮಹೇಂದ್ರ ಬುಲೇರೋ, ಬಜಾಜ್ ಪ್ಯಾಸೆಂಜರ್ ಆಟೋವನ್ನ ವಶಕ್ಕೆ ಪಡೆಯಲಾಗಿದೆ.ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳಾದ ಹಾಯ್ ಹೊಳೆ ಗ್ರಾಮದ ವಿಷ್ಣು ಬಿನ್ ಮುರಳಿ,ಭಾರತಿ ನಗರದ ವಾಸಿಗಳಾದ ಪಳನಿ ಬಿನ್ ಕಾಶಿ,ತಿರುಪತಿ ಬಿನ್ ಕೃಷ್ಣಪ್ಪ ಅವರನ್ನು ಬಂದಿಸಲು ಉನ್ನತವಾದ ತಂಡ ರಚನೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ. ಉಪ ವಲಯ ಅರಣ್ಯಾಧಿಕಾರಿ ಚನ್ನಬಸಪ್ಪ ಸಣ್ಣಗೌಡ್ರ. ಪ್ರಮೋದ್ ಕುಮಾರ್.ಟಿ ಮಂಜುನಾಥ್.ಪ್ರಸನ್ನಕುಮಾರ್, ಪಲ್ಲವಿ, ಗಸ್ತು ಅರಣ್ಯ ಪಾಲಕರಾದ ಸಲೀಮ್. ಎಂ.ಲ, ರಮೇಶ್ ಜಿಎನ್,.ಲ ಸಂತೋಷ್. ಪ್ರಮೋದ್ ರೆಡ್ಡರ್. ವಾಹನ ಚಾಲಕ ಸುನಿಲ್, ಮಹೇಶ್,ವೃಷಭ, ಶರಣ, ರಾಯುಡ್. ಡಿ ಭಾಗಿಯಾಗಿದ್ದರು.