ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ: ʼವಾರ್ತಾಭಾರತಿʼಗೆ 'ಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ 2025' ಪ್ರದಾನ
Update: 2025-03-14 20:04 IST

ಬೆಂಗಳೂರು : ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಾಗಿ ʼವಾರ್ತಾಭಾರತಿʼಗೆ ʼಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ 2025ʼ ಅನ್ನು ಬೆಂಗಳೂರಿನ ಸೇಂಟ್ ಪೌಲ್ಸ್ ಕಾಲೇಜಿನಲ್ಲಿ ಇಂದು(ಮಾ.14) ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ʼವಾರ್ತಾಭಾರತಿʼ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೊಪ್ಪಳ ವಿವಿ ಉಪಕುಲಪತಿ ಪ್ರೊ.ಬಿ.ಕೆ.ರವಿ, ರಾಜ್ಯ ಮಾಹಿತಿ ಆಯುಕ್ತರಾದ ಡಾ.ಬಿ.ಆರ್.ಮಮತಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಸೇಂಟ್ ಪೌಲ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಥೋಮಸ್ ಎಂ.ಜೆ, ಕಾಲೇಜಿನ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್ ವೇಣುಗೋಪಾಲ್ ಅವರು ಉಪಸ್ಥಿತರಿದ್ದರು.



