ತೂಕ ಮೋಸ ಕಂಡುಬಂದಲ್ಲಿ ಕಬ್ಬು ನುರಿಸುವಿಕೆ ಪರವಾನಗಿ ರದ್ದು: ಸಚಿವ ಶಿವಾನಂದ ಪಾಟೀಲ್

Update: 2024-01-03 15:50 GMT

ಕಲಬುರಗಿ: ತೂಕದಲ್ಲಿ ಏನಾದರು ವ್ಯತ್ಯಾಸ ಕಂಡುಬಂದು ಲಿಖಿತ ದೂರು ನೀಡಿದರೆ ಆ ಕಾರ್ಖಾನೆಯ ಕಬ್ಬು ನುರಿಸುವಿಕೆ ಪರವಾನಗಿ ರದ್ದು ಮಾಡುತ್ತೇವೆ ಎಂದು ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಎಸ್.ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ತೂಕದಲ್ಲಿ ಮೋಸ ಮಾಡಿದ್ದು ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಯ ಪರವಾನಗಿ ರದ್ದುಪಡಿಸಲಾಗುವುದು. ಆದರೆ, ಬಹುತೇಕ ರೈತರು ಲಿಖಿತ ದೂರು ಕೊಡಲು ಮುಂದೆ ಬರುತ್ತಿಲ್ಲ ಎಂದರು.

ಹೊಸ ಕಾಯ್ದೆ ಬಂದ ಬಳಿಕ ಎಪಿಎಂಸಿಯ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಎಪಿಎಂಸಿಗಳಲ್ಲಿನ ಪ್ರತಿ 100 ವಹಿವಾಟಿಗೆ 60 ಪೈಸೆ ಸೆಸ್ ದುರ್ಬಳಕೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳೀಯ ಏಜೆಂಟ್ ಗಳೇ ಇದರಲ್ಲಿ ಭಾಗಿಯಾದ ಆರೋಪಗಳಿವೆ. ವಿಚಕ್ಷಣ ದಳ ರಚನೆ ಮಾಡಿ, ಸೆಸ್ ದುರ್ಬಳಕೆ ನಿಯಂತ್ರಿಸಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News