ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಸಚಿವ ಮಧು ಬಂಗಾರಪ್ಪ

Update: 2023-07-11 16:27 GMT

ಬೆಂಗಳೂರು: 'ಚಕ್ರವರ್ತಿ ಸೂಲಿಬೆಲೆ ಹಾಗೂ ಸಾವರ್ಕರ್ ಪಠ್ಯವನ್ನು ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶಿಕ್ಷಣ ಸಚಿವ ಹೇಳಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪಠ್ಯದಲ್ಲಿ ಇನ್ನೂ ಬದಲಾವಣೆ ಮಾಡಬೇಕಿತ್ತು. ಅವುಗಳನ್ನು ಮುಂದಿನ ವರ್ಷದಲ್ಲಿ ಮಾಡುತ್ತೇವೆ. ಹಿಂದೆ ಇದ್ದ ಪಠ್ಯವನ್ನು ನಾವು ಸೇರಿಸಿದ್ದೇವೆಯೇ ಹೊರತು ಹೊಸದೇನನ್ನೂ ಸೇರಿಸಿಲ್ಲ. ಐಡಿಯಾಲಜಿ ಇರಬಾರದು ಎಂಬ ಕಾರಣಕ್ಕೆ ಪಠ್ಯವನ್ನು ಮರು ಪರಿಷ್ಕರಣೆ ಮಾಡಿದ್ದೇವೆ'' ಎಂದು ಹೇಳಿದರು.

ಹಿಂದಿನ ಸರಕಾರ ವಾರಕ್ಕೆ ಒಂದು ಮೊಟ್ಟೆ ನೀಡುತ್ತಿತ್ತು. ಇದು ಮಕ್ಕಳ ಆರೋಗ್ಯಕ್ಕೆ ಸಹಾಯಕಾರಿಯಾಗಿತ್ತು. ಹಾಗಾಗಿ ಒಂದು ಮೊಟ್ಟೆಯ ಬದಲಾಗಿ ಎರಡು ಮೊಟ್ಟೆ ನೀಡಲು ಮನವಿಮಾಡಿದೆ. ಹತ್ತನೆ ತರಗತಿ ಮಕ್ಕಳವರೆಗೂ ನೀಡಲು ಮನವಿ ಮಾಡಿದ್ದೆ, ಅದರಂತೆ ಬಜೆಟ್‍ನಲ್ಲಿ ಘೋಷಣೆಯಾಗಿದೆ ಎಂದು ಹೇಳಿದರು.

ಶಿಥಿಲ ವ್ಯವಸ್ಥೆಯಲ್ಲಿರುವ ಶಾಲಾ ಕಟ್ಟಡ ಹಾಗೂ ಕೊಠಡಿ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇವೆ. ಹೊಸ ಕೊಠಡಿ ಹಾಗೂ ಶೌಚಲಯಕ್ಕೆ ಬಜೆಟ್‍ನಲ್ಲಿ ಒಳ್ಳೆಯ ಅನುದಾನ ಸಿಕ್ಕಿದೆ. ಶೌಚಲಯ ನಿರ್ಮಾಣ ಹಾಗೂ ನಿರ್ವಾಹಣೆಗೂ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News