ಮಣಿಪುರ ಸಂಘರ್ಷಕ್ಕೆ ಕುಕಿ ಸಮುದಾಯದ ಜನರು ಗಾಂಜಾ ಬೆಳೆದು ಮೈತೈ ಯುವಕರನ್ನು ನಶೆಯ ದಾಸರನ್ನಾಗಿ ಮಾಡಿದ್ದೇ ಕಾರಣ ಎಂದ ಸೂಲಿಬೆಲೆ

Update: 2023-08-17 16:50 GMT

ಮೈಸೂರು,ಆ.17: ಮಣಿಪುರದಲ್ಲಿ ಕುಕಿ ಬುಡಕಟ್ಟು ಜನರು ಗಾಂಜಾ ಬೆಳೆದು ಮೈತೈ ಯುವಕರನ್ನು ನಶೆಯ ದಾಸರನ್ನಾಗಿ ಮಾಡಿದ್ದು ಹಾಗೂ ಕುಕಿ ಜನರಿಗೆ ಚೀನಾ ಬೆಂಬಲ ನೀಡಿದ್ದು ಮಣಿಪುರದಲ್ಲಿ ಸಂಘರ್ಷ ಉಂಟಾಗಲು ಕಾರಣ ಎಂದು ಹೇಳಿ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ವಿವಾದ ಸೃಷ್ಟಿಸಿದ್ದಾರೆ. 

ನಗರದ ಗೋಪಾಲ ಸ್ವಾಮಿ ಶಿಶುವಿಹಾರ ಶಾಲಾ ಆವರಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಬುಧವಾರ ಆಯೋಜಿಸಿದ್ದ ʼʼಮಣಿಪುರದ ಬೆಚ್ಚಿ ಬೀಳಿಸುವ ಘಟನೆ ಮನುಕುಲದ ಮನಕಲಕುವ ಚಿತ್ರಗಳು, ಸಭ್ಯ ಸಮಾಜ ತಲೆ ತಗ್ಗಿಸಬೇಕಾದ ನಡವಳಿಕೆ, ಆದರೆ ಸತ್ಯ ಏನು ಬನ್ನಿ ತಿಳಿದುಕೊಳೋಣʼʼ ಶೀರ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ʼಕುಕಿ ಬುಡಕಟ್ಟು ಸಮುದಾಯ ತಮಗೆ ದೊರೆತಿದ್ದ ಸವಲತ್ತನ್ನು ಅಕ್ರಮ ವಿಷಯಗಳಿಗೆ ಬಳಸಿಕೊಂಡಿದ್ದು, ಬಹುಸಂಖ್ಯಾತರಾದ ಮೈತೈಗಳನ್ನು ಯಾವುದಕ್ಕೂ ಪ್ರಯೋಜನವಿಲ್ಲದಂತೆ ಬಿಂಬಿಸಿದ್ದರು. ಅವರು ಡ್ರಗ್ಸ್ ಮಾರಾಟದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಬಿಜೆಪಿ ಸರ್ಕಾರ ತಂದ ಕೆಲವು ನಿಯಮಗಳಿಂದ ತಮ್ಮ ಬೆಲೆ ಕಡಿಮೆಯಾಗುತ್ತದೆ ಎಂದು ಸಂಘರ್ಷಕ್ಕೆ ಇಳಿದರುʼ ಎಂದರು.

ʼನಗರ ಪ್ರದೇಶವಾದ ಇಂಫಾಲ್‍ನಲ್ಲಿ ಮೈತೈಗಳು ತೋರಿದ ಕ್ರೂರತೆ ಕಾಣುತ್ತದೆ. ಆದರೆ, ಗುಡ್ಡಗಾಡಿನಲ್ಲಿ ಕುಕಿಗಳು ಮಾಡುತ್ತಿರುವ ಕ್ರೌರ್ಯ ಕಾರಣ ಪ್ರಚಾರ ಪಡೆಯುತ್ತಿಲ್ಲ. ಬೆತ್ತಲೆ ವಿಡಿಯೊ ಕೂಡ ಸಂಸತ್ ಅಧಿವೇಶನ 2 ದಿನ ಮುನ್ನ ಬಿಡುಗಡೆಯಾಗುತ್ತದೆ. ಅದಕ್ಕೆ ತಯಾರಾಗಿ ಪ್ರತಿಪಕ್ಷದವರು ಮಾತನಾಡುತ್ತಾರೆ. ಇವರೆಲ್ಲರ ಬೆನ್ನಮೇಲೆ ಬಂದೂಕು ಇಟ್ಟವರು ಯಾರು? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News