ಸಂಸದರ ಅಮಾನತು; ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ: ಜಗದೀಶ್ ಶೆಟ್ಟರ್

Update: 2023-12-22 10:11 GMT

ಹುಬ್ಬಳ್ಳಿ: ಸಂಸತ್ ಕಲಾಪದಿಂದ ನೂರಕ್ಕೂ ಹೆಚ್ಚು ಸಂಸದರ ಅಮಾನತು ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರ ಅಮಾನತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳು ಆಗಬೇಕು. ಧರಣಿ ಮಾಡ್ತಾರೆ ಅಂತ ನೆಪ ಮಾಡಿಕೊಂಡು ಅಮಾನತು ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿದು ಹೋಗಿದೆ ಅನ್ನೋದಕ್ಕೆ ಇದು ಸಾಕ್ಷಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದರು.

ಇಂಡಿಯಾ ಒಕ್ಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಕೆಲವರ ಅಪಸ್ವರ ವಿಚಾರವಾಗಿ ಪ್ರತಕ್ರಿಯಿಸಿದ ಅವರು,

ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಪ್ರಧಾನಿ ಅಭ್ಯರ್ಥಿ ಯಾರೆಂಬುದು ಎಲ್ಲರಲ್ಲೂ ಒಮ್ಮತದ ತೀರ್ಮಾನ ಬೇಕಾಗುತ್ತೆ. ಮಲ್ಲಿಕಾರ್ಜುನ ಖರ್ಗೆ ಬಹಳ ಅನುಭವ ಇರುವ ರಾಜಕಾರಣಿಯಾಗಿದ್ದು, ಕೆಲ ಪಕ್ಷದವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಸಲಹೆ ಮಾಡಿದ್ದಾರೆ ಎಂದರು.

ಒಳ್ಳೆಯ ಆಡಳಿತಗಾರರಾಗಿರುವ ಖರ್ಗೆ ಅವರುಎಲ್ಲ ರೀತಿಯಿಂದಲೂ ಅರ್ಹ ವ್ಯಕ್ತಿಯಾಗಿದ್ದಾರೆ. ಆದರೆ ಈ ವಿಚಾರದಲ್ಲಿ ಒಕ್ಕೂಟದ ಎಲ್ಲ ಸದಸ್ಯರ ಸರ್ವನಾಮಪದ ನಿರ್ಣಯ ಅಗತ್ಯವಿದೆ. ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿದ್ದಾರೆ. ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿ ಯಾರೆಂಬುದು ತೀರ್ಮಾನ ಆಗಬಹುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News