ಸಹೋದ್ಯೋಗಿಯಿಂದಲೇ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ: ಎಫ್‍ಐಆರ್ ದಾಖಲು
Update: 2023-09-17 14:37 GMT
ಬೆಂಗಳೂರು, ಸೆ.17: ಖಾಸಗಿ ಕಂಪೆನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪದಡಿ ಕಂಪೆನಿಯ ಹಿರಿಯ ಸಹದ್ಯೋಗಿ ವಿರುದ್ಧ ಇಲ್ಲಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ನಗರದ ಎಂ.ಜಿ ರಸ್ತೆ ಸಮೀಪದ ಮೇಗ್ರಾಥ್ ರಸ್ತೆಯಲ್ಲಿರುವ ವಿದೇಶಿ ಮೂಲದ ಲಿಬ್ರೆ ವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಆರೋಪಿ ಪ್ರೇಮ್ ಚಂದರ್, ಕೆಲಸದ ವೇಳೆ ಮಹಿಳಾ ಟೆಕ್ಕಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಪ್ರೇಮ್ ಚಂದರ್ನ ನ ವರ್ತನೆಗೆ ಬೇಸತ್ತ ಸಂತ್ರಸ್ತ ಯುವತಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.