ತೆಲಂಗಾಣ ವಿಧಾನಸಭಾ ಚುನಾವಣೆ | ಕ್ಷೇತ್ರ ಉಸ್ತುವಾರಿಗಳನ್ನಾಗಿ ರಾಜ್ಯದ ಸಚಿವರು, ಶಾಸಕರನ್ನು ನೇಮಿಸಿದ AICC

Update: 2023-11-04 17:20 GMT

(Photo | PTI)

ಹೊಸದಿಲ್ಲಿ:4: ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಕ್ಷೇತ್ರ ಉಸ್ತುವಾರಿಗಳನ್ನಾಗಿ ಕರ್ನಾಟಕದ 10 ಸಚಿವರು ಹಾಗೂ ಕ್ಷೇತ್ರ ವೀಕ್ಷಕರಾಗಿ 48 ಶಾಸಕರನ್ನು ಎಐಸಿಸಿ  ಶನಿವಾರ ನೇಮಕ ಮಾಡಿದೆ.

ಕ್ಲಸ್ಟರ್ ಉಸ್ತುವಾರಿಗಳಾಗಿ ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಡಿ.ಸುಧಾಕರ್, ಶಿವರಾಜ್ ತಂಗಡಗಿ, ಈಶ್ವರ ಖಂಡ್ರೆ, ಕೆ.ಹೆಚ್.ಮುನಿಯಪ್ಪ, ಝಮೀರ್ ಅಹ್ಮದ್ ಖಾನ್, ಕೃಷ್ಣ ಬೈರೇಗೌಡ, ಶರಣ ಪ್ರಕಾಶ್ ಪಾಟೀಲ್​ ಮತ್ತು ಬಿ.ನಾಗೇಂದ್ರ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಅದೇ ರೀತಿ ಕ್ಷೇತ್ರ ವೀಕ್ಷಕರಾಗಿ ವಿಧಾನ ಪರಿಷತ್ ಸದಸ್ಯೆ ಉಮಾ‍ಶ್ರೀ, ನಸೀರ್ ಅಹ್ಮದ್, ಶಾಸಕ ಕೆ.ಸಿ. ವೀರೇಂದ್ರ, ಅನಿಲ್ ಚಿಕ್ಕಮಾದು ಸೇರಿ 48 ಶಾಸಕರನ್ನು ಎಐಸಿಸಿ ನೇಮಕ ಮಾಡಿದೆ.

ಸಂಪೂರ್ಣ ಪಟ್ಟಿ ಇಲ್ಲಿದೆ... 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News