ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ 30 ನೇ ಪುಣ್ಯ ಸ್ಮರಣೆ

Update: 2023-08-22 06:49 GMT

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಅವರ 30 ನೇ ಪುಣ್ಯ ಸ್ಮರಣೆಯನ್ನು ಇಂದು ಗಾಂಧಿನಗರ ಕ್ಷೇತ್ರದ ಶಾಸಕರ ಭವನದಲ್ಲಿ ಆಚರಿಸಲಾಯಿತು.

ದಿ. ಆರ್ ಗುಂಡೂರಾವ್ ಅವರ ಪ್ರೀತಿಯ ಪುತ್ರ, ಮಾನ್ಯ ಆರೋಗ್ಯ ಸಚಿವ, ದ.ಕ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಅವರು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ನಮನ ಸಲ್ಲಿಸಿದರು.

ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ದಿ. ಆರ್ ಗುಂಡೂರಾವ್ ಅವರು ನೇರ ನುಡಿಯ ಧೈರ್ಯಶಾಲಿ ನಾಯಕ ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರಲ್ಲಿ ಗುಂಡೂರಾವ್ ಕೂಡ ಒಬ್ಬರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರು ಹೊರಗೆ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಆಡಳಿತವನ್ನ ಜನರ ಬಳಿಗೆ ಕೊಂಡೊಯ್ಯುವ ಮಾದರಿ ಹಾಕಿಕೊಟ್ಟಿದ್ದರು.‌

ಬೆಂಗಳೂರು ಅಭಿವೃದ್ಧಿ ಬಗ್ಗೆ ಕನಸುಕಂಡಿದ್ದ ಆರ್. ಗುಂಡೂರಾವ್ ಅವರು ಹೆಚ್ಚು ಕಾಳಜಿ ವಹಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣ ನಿರ್ಮಿಸಿಕೊಟ್ಟರು.‌ ವಯೋಮಿತಿ ಮೀರಿದ ಶಿಕ್ಷಕ ಅಭ್ಯರ್ಥಿಗಳ ಮನೆಬಾಗಿಲಿಗೇ ನೇಮಕಾತಿ ಆದೇಶ ಕೊಟ್ಟಿದ್ದು ಅವರ ದಿಟ್ಟ ನಿರ್ಧಾರಗಳಿಗೆ ಸಾಕ್ಷಿಯಾಗಿತ್ತು.

ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಮಾಸಾಶನ ಯೋಜನೆ ಜಾರಿಗೊಳಿಸಿದ್ದು, ಮುಖ್ಯವಾಗಿ ಅಧಿಕಾರಶಾಹಿಯನ್ನು ಬಡಿದೆಬ್ಬಿಸಿದ್ದು ಕರ್ನಾಟಕದಲ್ಲಿ ಹೊಸ ಆಡಳಿತ ಅಲೆ ಬೀಸಲು ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News