ಸರಕಾರಿ ಅಭಿಯೋಜಕರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸುವ ಆದೇಶ ರದ್ದುಪಡಿಸಿದ ಹೈಕೋರ್ಟ್

Update: 2024-01-28 14:27 GMT

ಬೆಂಗಳೂರು: ಪೋಕ್ಸೋ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ರಚನೆ ಮಾಡಲಾಗಿರುವ ಕೋರ್ಟ್‍ಗಳಿಗೆ ಸರಕಾರಿ ಅಭಿಯೋಜಕರನ್ನು(ಪಿಪಿ) ವಿಶೇಷ ಸರಕಾರಿ ಅಭಿಯೋಜಕರನ್ನಾಗಿ (ಎಸ್‍ಪಿಪಿ) ನಾಮನಿರ್ದೇಶನ ಮಾಡುವ ರಾಜ್ಯ ಸರಕಾರದ ತೀರ್ಮಾನವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

ಫೋಕ್ಸೊ ಕೋರ್ಟ್‍ಗಳಲ್ಲಿ ಪ್ರಕರಣಗಳನ್ನು ನಡೆಸಲು ಗುತ್ತಿಗೆ ಆಧಾರದ ಮೇಲೆ ಎಸ್‍ಪಿಪಿಗಳಾಗಿ ನೇಮಕಗೊಂಡ ವಕೀಲರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಬರುವ ಏಪ್ರೀಲ್ ತಿಂಗಳಲ್ಲಿ ಫೋಕ್ಸೊ ಕಾಯಿದೆ ಯಡಿ ರಚನೆಯಾಗಿರುವ ನ್ಯಾಯಾಲಯಳಿಗೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸುವಂತೆ ಆದೇಶ ನೀಡಿದೆ. ಜತೆಗೆ, ಗುತ್ತಿಗೆ ಆಧಾರದ ಮೇಲೆ ಈ ಹಿಂದೆ ಎಸ್‍ಪಿಪಿಗಳಾಗಿ ನೇಮಕಗೊಂಡ ವಕೀಲರು ತಮ್ಮ ಕರ್ತವ್ಯಗಳನ್ನು ಪುನರಾರಂಭಿಸಬಹುದು ಎಂದು ಪೀಠ ತಿಳಿಸಿದೆ.

ಫೋಕ್ಸೊ ಕಾಯಿದೆಯ ಸೆಕ್ಷನ್ 32ರ ಅಡಿ ರಾಜ್ಯ ಸರಕಾರವು ಪ್ರತಿ ವಿಶೇಷ ಕೋರ್ಟ್‍ಗೆ ಎಸ್‍ಪಿಪಿಯನ್ನು ನೇಮಿಸುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದರಂತೆ ರಾಜ್ಯ ಸರಕಾರವು ಪ್ರತಿ ವಿಶೇಷ ನ್ಯಾಯಾಲಯಕ್ಕೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಬೇಕು ಮತ್ತು ಹಾಗೆ ನೇಮಕಗೊಂಡ ವ್ಯಕ್ತಿಯು ಫೋಕ್ಸೊ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಮಾತ್ರ ಪ್ರಕರಣಗಳನ್ನು ನಡೆಸಬೇಕು. ಅಲ್ಲದೆ, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕಾದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಕರಣಗಳನ್ನು ನಡೆಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News