ದೇಗುಲಗಳಲ್ಲಿ ಅನುವಂಶಿಕ ಅರ್ಚಕರ ನೇಮಕಾತಿಗೆ ರಾಜ್ಯ ಸರಕಾರ ಆದೇಶ
Update: 2023-12-05 18:05 GMT
ಬೆಂಗಳೂರು, ಡಿ.5: ಧಾರ್ಮಿಕ ದತ್ತಿ ಇಲಾಖೆಯ ‘ಸಿ’ ವರ್ಗದ ದೇವಸ್ಥಾನಗಳ ಅನುವಂಶಿಕ ಅರ್ಚಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಹೊಸ ಆದೇಶ ಹೊರಡಿಸಿದೆ. ತಹಶೀಲ್ದಾರರ ಮಟ್ಟದಲ್ಲಿ ಷರತ್ತು ಬದ್ಧವಾಗಿ ಅನುವಂಶಿಕ ಅರ್ಚಕ ಪದ್ಧತಿ ಮುಂದುವರಿಸಲು ಆದೇಶಿಸಿದೆ.
ಅರ್ಚಕರು ತೀವ್ರ ಅನಾರೋಗ್ಯ ಅಥವಾ ವಯಸ್ಸಾದ ಸಂದರ್ಭದಲ್ಲೂ ಅನುವಂಶಿಕ ನೇಮಕಾತಿಗೆ ಧಾರ್ಮಿಕ ದತ್ತಿ ಇಲಾಖೆ ಅನುಮತಿ ನೀಡಿದೆ. ನ.17ರಂದು ರಾಜ್ಯದ ಮುಜರಾಯಿ ದೇವಾಲಯಗಳ ವಿಚಾರದಲ್ಲಿ ರಾಜ್ಯ ಸರಕಾರ ಆದೇಶ ಪ್ರಕಟಿಸಿತ್ತು. ಆ ಮೂಲಕ ಅರ್ಚಕರ ಸಮೂಹದ ಕೋರಿಕೆ ಈಡೇರಿತ್ತು.
ಅರ್ಚಕರ ಬಹುಕಾಲದ ಬೇಡಿಕೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಅಸ್ತು ಎಂದಿದ್ದರು. ಬಳಿಕ ಸರಕಾರ ಕೂಡ ಈ ಕುರಿತು ಆದೇಶ ಹೊರಡಿಸಿದೆ.