ಬೆಂಗಳೂರು: ಅತ್ತೆ ಮನೆಯಲ್ಲಿ ಕಳ್ಳತನ; ಆರೋಪಿ ಅಳಿಯನ ಬಂಧನ

Update: 2023-11-21 17:17 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಯುವತಿಯೊಬ್ಬಳನ್ನು ಪ್ರೀತಿಸಿ, ಆಕೆಯ ಮನೆಯವರನ್ನು ಯಾಮಾರಿಸಿ ಯುವತಿಯನ್ಕನು ರೆದುಕೊಂಡು ಹೋಗಿದ್ದ ವ್ಯಕ್ತಿಯೊಬ್ಬ ಒಂದೂವರೆ ವರ್ಷದ ನಂತರ ಅತ್ತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಅಳಿಯನನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಪ್ರದೀಪ್ ಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು ರೆಜಿನಾ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದ ಅರೋ[ಪಿ, ಒಂದೂವರೆ ವರ್ಷದ ಹಿಂದೆ ಆಕೆಯನ್ನು ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2023ರ ಅ.30ರಂದು ರೆಜಿನಾ ಕನ್ಯಾಕುಮಾರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆ ಬಳಿ ಬಂದಿದ್ದ ಪ್ರದೀಪ್ ಕುಮಾರ್, ಚಿನ್ನಾಭರಣ ಸೇರಿದಂತೆ ಮನೆಯ ವಸ್ತುಗಳನ್ನು ಸಾಗಿಸಲಾರಂಭಿಸಿದ್ದ.

ಈ ವೇಳೆ ರೆಜಿನಾರ ಮನೆಯ ಅಕ್ಕ ಪಕ್ಕದ ನಿವಾಸಿಗಳು ನೋಡಿ ಪ್ರಶ್ನಿಸಿದಾಗ ‘ನಾನು ಅವರ ಸಂಬಂಧಿ' ಎಂದು ಹೇಳಿದ್ದ. ಆದರೂ, ಸಹ ಅನುಮಾನಗೊಂಡ ಸ್ಥಳೀಯರು ಮೊಬೈಲ್ ನಲ್ಲಿ ಫೊಟೋ ತೆಗೆದು ರೆಜಿನಾಗೆ ಕರೆ ಮಾಡಿದ್ದರು. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ರೆಜಿನಾ ವಾಪಸ್ ಬಂದಾಗ ಮನೆಯ ಬಾಗಿಲು ಒಡೆದು ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ರೂ. ಮೌಲ್ಯದ ವಸ್ತುಗಳ ಕಳ್ಳತನವಾಗಿರುವುದು ಗೊತ್ತಾಗಿತ್ತು.

ಕಳ್ಳತನವಾಗಿರುವುದನ್ನು ತಿಳಿದ ಕೂಡಲೇ ಅಕ್ಕ-ಪಕ್ಕದ ನಿವಾಸಿಗಳು ತಾವು ನೋಡಿರುವುದಾಗಿ ಫೋಟೋ ತೋರಿಸಿದಾಗ ಇದು ತನ್ನ ಅಳಿಯನಿಂದ ನಡೆದಿರುವ ಕೃತ್ಯ ಎಂಬುದು ಬಯಲಾಗಿತ್ತು. ತಕ್ಷಣ ತನ್ನ ಅಳಿಯ ಪ್ರದೀಪ್ ಕುಮಾರ್ ವಿರುದ್ಧ ರೆಜಿನಾ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News