ಚನ್ನಪಟ್ಟಣದಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆಯೂ ಒತ್ತಡವಿದೆ : ಡಿ.ಕೆ.ಸುರೇಶ್

Update: 2024-10-20 18:39 IST
ಚನ್ನಪಟ್ಟಣದಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆಯೂ ಒತ್ತಡವಿದೆ : ಡಿ.ಕೆ.ಸುರೇಶ್
  • whatsapp icon

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆಯೂ ಪಕ್ಷದ ಕಾರ್ಯಕರ್ತರ ಒತ್ತಾಯವಿದೆ. ಆದರೆ, ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪರೋಕ್ಷವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಿನ್ನೆ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಲಾಗಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದಿದ್ದಾರೆ. ನಾನು ಅಭ್ಯರ್ಥಿ ಆಗಬೇಕೆಂದು ಒತ್ತಾಯ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿ ನಾನು ಎಂದು ನುಡಿದರು.

ಅಧಿಕಾರ, ಚುನಾವಣೆ ದೃಷ್ಟಿಯಿಂದ ನಾನಿಲ್ಲ. ಮುಖಂಡರು ನನ್ನ ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯವಲ್ಲ, ಪಕ್ಷ ನನಗೆ ಅನಿವಾರ್ಯ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಗೌರವಕ್ಕೆ ನಾನು ಸದಾ ಋಣಿ. ನಾನುಕಾರ್ಯಕರ್ತರಿಗೆ ಭರವಸೆ ನೀಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದಿದ್ದೇನೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿ, ಒಂದು ಜೆಡಿಎಸ್‍ಗೆ ಬಿಟ್ಟಿದ್ದಾರೆ ಎಂಬುದು ಸ್ಪಷ್ಟ. ಮೂರನೇ ಅಭ್ಯರ್ಥಿ ಜೆಡಿಎಸ್‍ಗೆ ಕೊಟ್ಟಿದ್ದಾರೆ. ಯಾರು ತೀರ್ಮಾನ ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎನ್ನುವುದು ಅವರ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ನಮ್ಮ ಪಕ್ಷ ಸದೃಢವಾಗಿದೆ, ಮುಕ್ತ ಮನಸ್ಸಿನಿಂದ ಪಕ್ಷ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಎಚ್‍ಡಿಕೆ ಮಂತ್ರಿಯಾಗಿಯೇ ಇರಲ್ಲ: ‘ಕಾಂಗ್ರೆಸ್ ಸರಕಾರ ಐದು ವರ್ಷವೂ ಇರುವುದಿಲ್ಲ’ ಎಂದು ಹೇಳಿದ್ದಾರೆ. ಆದರೆ, ಕುಮಾರಸ್ವಾಮಿನೂ ಕೇಂದ್ರ ಸಚಿವನಾಗಿ ಇರಲ್ಲ. ಅವನೂ ಇನ್ನೊಂದು ಆರು ತಿಂಗಳೋ ವರ್ಷಕ್ಕೋ ಅವನೂ ಮನೆಗೆ ಹೋಗ್ತಾನೆ. ಏನು ಮಾಡೋದಕ್ಕಾಗುತ್ತದೆ. ಅವನು ಯಾವ ಕಾರಣದಲ್ಲಿ ಹೇಳ್ದ ನಮ್ಮ ಸರ್ಕಾರ ಇರಲ್ಲ ಅಂತ?. ಆ ಪಾರ್ಟಿ ಯಾವ ಕಾರಣ ಕೊಟ್ಟು ನಮ್ಮ ಸರ್ಕಾರ ಇರಲ್ಲ ಅಂತ ಹೇಳಿದ್ನೋ, ಅದೇ ಕಾರಣ ನಾನೂ ಹೇಳ್ತಿರೋದು ಎಂದು ಸುರೇಶ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News