ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ: ಸಚಿವ​ ಮಲ್ಲಿಕಾರ್ಜುನ ಭೇಟಿ ಬಳಿಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ

Update: 2023-09-17 13:36 GMT

ದಾವಣಗೆರೆ : ಮಾಜಿ ಸಚಿವ, ಬಿಜೆಪಿ‌ ಮುಖಂಡ ಎಂ.ಪಿ.ರೇಣುಕಾ ಚಾರ್ಯ ಅವರು ಭಾನುವಾರ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದ ವಿಚಾರದಲ್ಲಿ ಹಾಗೂ ಭದ್ರಾ ನಾಲೆ ಸಮಸ್ಯೆ ಸೇರಿದಂತೆ ರೈತರ ಸಮಸ್ಯೆ ಕುರಿತು ಚರ್ಚೆ ಮಾಡಿರುವೆ. ಅಲ್ಲದೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಧುಬಂಗಾರಪ್ಪ ಭೇಟಿ ಮಾಡಿರುವೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಜನ್ಮದಿನ ಹಿನ್ನಲೆಯಲ್ಲಿ ಶುಭಾಶಯ ಕೋರಿದ್ದಾನೆ. ಕೇವಲ ಸೌಹಾರ್ದಯುತ ಭೇಟಿ ಎಂದರು.

ನನಗೆ ಅಧಿಕೃತವಾಗಿ ಕಾಂಗ್ರೆಸ್ ನವರು ಪಕ್ಷ ಸೇರ್ಪಡೆಯಾಗಲು ಆಹ್ವಾನ ನೀಡಿಲ್ಲ ನಾನು ಅವರನ್ನು ಕೇಳಿಲ್ಲ ನಾನು ಸದ್ಯಕ್ಕೆ ಬಿಜೆಪಿಯಲ್ಲಿದ್ದೇನೆ ಇದು ಒಂದು ಔಪಚಾರಿಕವಾದ ಭೇಟಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಾರೈಕೆ ಉತ್ತರ ನೀಡಿದರು.

ದಾವಣಗೆರೆಯಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರನ್ನು ಬಿಟ್ಟು ತಮಗೆ ಬೇಕಾದವರನ್ನು ಜಿಲ್ಲಾಧ್ಯಕ್ಷ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ನಿಷ್ಠಾವಂತರಾಗಿ ದುಡಿದವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಎಸ್ ಎಸ್ ಮಲ್ಲಿಕಾರ್ಜುನ್ ಅವರು ವಿಶ್ವಾಸದಲ್ಲಿ ಆಹ್ವಾನ ಮಾಡಿದ್ದಾರೆ. ನಾನು ಬಿಜೆಪಿಯಲ್ಲೇ ಇದ್ದೇನೆ, ಬಿಜೆಪಿ ಎಂಪಿ ಟಿಕೆಟ್ ಆಕಾಂಕ್ಷಿ. ನೋಡೋಣ ಮುಂದೇ ಏನಾಗುತ್ತೊ ಕಾದು ನೋಡೊಣ. ಬಿಜೆಪಿ ಹೆತ್ತ ತಾಯಿಗೆ ಸಮಾನ, ಆದರೆ, ಬಿಜೆಪಿಯ ಕೆಲವರ ದೌರ್ಬಲ್ಯಗಳ ಬಗ್ಗೆ ಮಾತನಾಡಿದ್ದೆ.ಅದರೆ , ಬಿಜೆಪಿ ಜಿಲ್ಲಾಧ್ಯಕ್ಷ ನನ್ನ ಬಗೆ ಹಗುರವಾಗಿ ಮಾತನಾಡಿದ್ದಾರೆ. ಯಾರೋ ಕಟ್ಟಿದ್ದ ಪಕ್ಷದಲ್ಲಿ ಬಾಯಿಗೆ ಬಂದಂತೆ ಮಾತನಾಡಬೇಡಿ. ನನ್ನ ಬಗ್ಗೆ ಮಾತನಾಡಿದರೇ ಸರಿಯಲ್ಲʼʼ ಎಂದು ಬಿಜೆಪಿ ಜಿಲ್ಲಾ ಧ್ತಕ್ಷ ವೀರೇಶ ಹನಗವಾಡಿ ಅವರಿಗೆ ಎಚ್ಚರಿಕೆ ನೀಡಿದರು.

ʼʼನನಗೆ ಎಚ್ಚರಿಕೆ ಕೊಡಲು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಏನು ಅಧಿಕಾರವಿದೆ.ಬಿಜೆಪಿಗೆ ಅವರ ಕೊಡುಗೆ ಏನು. ಚುನಾವಣೆ ಸಮಯದಲ್ಲಿ ಕ್ಷೇತ್ರಗಳಿಗೆ ಬಂದಿದ್ದರಾʼʼ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕರೆ ಮಾಡಿದ್ದು ನಿಜ. ಅತ್ಮೀಯರು ಸೌಹಾರ್ದಯುತವಾಗಿ ಕರೆ ಮಾಡಿ ಮಾತನಾಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News