ರಾಜಕೀಯ ಸೇರುವವರಿಗೆ 1 ವರ್ಷ ತರಬೇತಿ: ಸ್ಪೀಕರ್ ಯು.ಟಿ.ಖಾದರ್

Update: 2023-06-26 16:16 GMT

ಬೆಂಗಳೂರು, ಜೂ.26: ಪದವಿ ಪೂರ್ಣಗೊಳಿಸಿ ರಾಜಕೀಯ ಆಸಕ್ತಿಯುಳ್ಳವರಿಗೆ ಒಂದು ವರ್ಷಗಳ ತರಬೇತಿ ನೀಡುವ ಚಿಂತನೆ ಇದ್ದು, ಈ ಸಂಬಂಧ ತರಬೇತಿ ಕೇಂದ್ರವನ್ನು ಆರಂಭಿಸುವ ಕುರಿತು ಪ್ರಕಟಿಸಲಾಗುವುದು ಎಂದುವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ರಾಜ್ಯದ 16ನೆ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಸೋಮವಾರ ಇಲ್ಲಿನ ನೆಲಮಂಗಲದ ಎಸ್‍ಡಿಎಂ ಇನ್‍ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಯುವ ಸಮೂಹ ರಾಜಕೀಯ ಪ್ರವೇಶ ಮಾಡಬೇಕು. ಇದರ ಬಗ್ಗೆ ಆಸಕ್ತಿಯೂ ಹೆಚ್ಚಾಗಬೇಕು. ಹಾಗಾಗಿ, ತರಬೇತಿ ಕೇಂದ್ರವೊಂದನ್ನು ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲಿಯೇ ತರಬೇತಿ ಕುರಿತ ನಿರ್ಧಾರ ಹೊರಬೀಳಲಿದೆ ಎಂದು ಅವರು ತಿಳಿಸಿದರು.

ನನಗೂ ಮೊದಲು ಸದನದ ನಡುವಳಿಕೆ ಬಗ್ಗೆ ಗೊತ್ತಿರಲಿಲ್ಲ. ಈ ವೇಳೆ ಮಾಜಿ ಶಾಸಕ ಧೃವ ನಾರಾಯಣ ಅವರ ಬಳಿ ಕೇಳಿ ಕಲಿಯುತ್ತಿದ್ದೆ. ಹೀಗಾಗಿ, ಮೊದಲ ಬಾರಿಗೆ ಶಾಸಕರಾಗಿರುವವರಿಗೆ ಪ್ರತಿಯೊಬ್ಬರ ನಡುವೆ ಸಹಕಾರ ಬೆಳೆಯಬೇಕು. ಆಗ ಮಾತ್ರ ಸದನದಲ್ಲಿ ಧೈರ್ಯದಿಂದ ಭಾಗವಹಿಸಲು ಸಾಧ್ಯ ಎಂದು ನುಡಿದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News