ತುಂಗಭದ್ರಾ ಅಣೆಕಟ್ಟು | ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ

Update: 2024-08-17 15:47 GMT

ಹೊಸಪೇಟೆ : ತುಂಗಭದ್ರಾ ಅಣೆಕಟ್ಟು ಚೈನ್ ಲಿಂಕ್ ಮುರಿದ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕವಾಗಿ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಮುಗಿದಿದ್ದು, ತಂತ್ರಜ್ಞ ಕನ್ನಯ್ಯ ನಾಯ್ಡು ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ಹರಿಯುತ್ತಿರುವ ನೀರಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆಯು ಯಶಸ್ವಿಯಾಗಿದೆ. 5 ಎಲಿಮೆಂಟ್ ಗಳಲ್ಲಿ ಈ ಸ್ಟಾಪ್ ಗೇಟನನ್ನು ಕೂರಿಸಲಾಗಿದೆ.

ನೀರಿನ ರಭಸ ಕಡಿಮೆಯಾದಂತೆ ಮುರಿದ ಹಳೆಯ ಕ್ರಸ್ಟ್ ಗೇಟು ಪತ್ತೆಯಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News