ರಾಮನ ಹೆಸರು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಅವಮಾನ : ಸಚಿವ ಪ್ರಿಯಾಂಕ್ ಖರ್ಗೆ

Update: 2024-03-25 12:16 GMT

ಬೆಂಗಳೂರು: ‘ಬಿಜೆಪಿಯ ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ʼಎಕ್ಸ್‌ʼ ನಲ್ಲಿ ಪೋಸ್ಟ್ ಹಾಕಿರುವ ಅವರು, ‘10 ವರ್ಷಗಳ ಹಿಂದೆ ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು. ಈಗ 10 ವರ್ಷ ಕಳೆದ ನಂತರ ಭೂತಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ. ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆಯೂ ಇಲ್ಲದೇ ಆಡಳಿತ ನಡೆಸಿದರು’ ಎಂದು ಟೀಕಿಸಿದ್ದಾರೆ.

‘10 ವರ್ಷಗಳ ಆಡಳಿತದ ನಂತರವೂ ಅಚ್ಚೇ ದಿನಗಳ ಭರವಸೆ ಈಡೇರಲಿಲ್ಲ, ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆಗೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಏರಿಕೆ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ⁠ಸ್ವಿಸ್‍ಬ್ಯಾಂಕ್ ಮಾಹಿತಿ ತರುತ್ತೇವೆ ಎಂದವರು, ಎಸ್‍ಬಿಐ ಬ್ಯಾಂಕ್ ಮಾಹಿತಿಯನ್ನೇ ಮುಚ್ಚಿಡುತ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News