ಬೆಂಗಳೂರು ಜಾಗತಿಕ ಮಟ್ಟದ ವಾಸಯೋಗ್ಯ ನಗರವನ್ನಾಗಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-12-14 12:13 GMT

ಬೆಳಗಾವಿ : ಉತ್ತಮ ಆರೋಗ್ಯ, ಸಂಚಾರ ಸೇರಿದಂತೆ ರಾಜಧಾನಿ ಬೆಂಗಳೂರನ್ನು ಜಾಗತಿಕ ಮಟ್ಟದ ವಾಸಯೋಗ್ಯ ನಗರವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರನ್ನು ಉತ್ತಮ ದರ್ಜೆಯ ನಗರವನ್ನಾಗಿಸಲು ಪಣ ತೊಡಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ತ್ಯಾಜ್ಯ ವಿಲೇವಾರಿ, ಸಂಚಾರ ದಟ್ಟಣೆ, ಸರಗಳ್ಳತನ ಹೀಗೆ ಎಲ್ಲ ಸಮಸ್ಯೆಗಳನ್ನು ಒಂದು ವ್ಯವಸ್ಥಿತ ಯೋಜನೆ ಮೂಲಕ ನಿವಾರಿಸಲಾಗುವುದು ಎಂದು ಹೇಳಿದರು.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಹಾಗೂ ಯೋಜನೆಗೆ ಸಂಬಂಧಿಸಿದಂತೆ 70,000ಕ್ಕೂ ಹೆಚ್ಚು ಅಭಿಪ್ರಾಯ, ಸಲಹೆಗಳು ಬಂದಿದೆ. ಇದರಲ್ಲಿ ಆರೋಗ್ಯ, ಸಂಚಾರ, ತ್ಯಾಜ್ಯ ಹೀಗೆ ಹಂಚಿಕೆ ಮಾಡಿ ಹಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಪ್ಪಿಸಲು ಒಟ್ಟು 25 ಜಂಕ್ಷನ್‍ಗಳನ್ನು ಅಭಿವೃದ್ಧಿಪಡಿಸುವ 27.90 ಕೋಟಿಗಳ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸುಗಮ ಸಂಚಾರಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ʼಸಮಗ್ರ ಸಂಚಾರ ಯೋಜನೆ' ಗಾಗಿ ಕಾರ್ಯಸಾಧ್ಯತೆ ಯೋಜನೆ ವರದಿ ತಯಾರಿಸಲು ಅಲ್ವಿನಾಕ್ ಸಂಸ್ಥೆಗೆ ವಹಿಸಲಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News