ಅಣ್ಣನ ಮನೆಯಲ್ಲೇ ಕಳ್ಳತನ ಮಾಡಿದ್ದ ತಮ್ಮನ ಬಂಧನ

Update: 2023-07-09 16:01 GMT

ಬೆಂಗಳೂರು: ಆನ್‍ಲೈನ್ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಅಣ್ಣನ ಮನೆಯಲ್ಲಿಯೇ ಚಿನ್ನಾಭರಣ ಕಳ್ಳತನ ಮಾಡಿದ್ದ ತಮ್ಮನನ್ನು ನಗರದ ದಕ್ಷಿಣ ವಿಭಾಗದ ಸಿದ್ದಾಪುರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಮೀಜಾನ್ ಎಂಬವರು ಜು.4ರಂದು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ತಮ್ಮನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಹಮ್ಮದ್ ಪರ್ವೀನ್ (22) ಎಂಬವನನ್ನು ಬಂಧಿಸಿ ಆತನಿಂದ 78.3 ಗ್ರಾಂ ಚಿನ್ನ ಮತ್ತು 288 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮೇಶ್ವರ ನಗರದಲ್ಲಿ ದೂರುದಾರ ಮಿಜಾನ್ ವಾಸವಾಗಿದ್ದ. ಈತನೊಂದಿಗೆ ತಾಯಿ, ತಮ್ಮ ಸಹ ವಾಸವಾಗಿದ್ದರು. ಮಿಜಾನ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ಮೊಹಮ್ಮದ್ ಪರ್ವೀನ್ ಮೆಡಿಕಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಅವಿವಾಹಿತನಾಗಿದ್ದ ಮೊಹಮ್ಮದ್ ಪರ್ವೀನ್, ಆನ್‍ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ. ಬೆಟ್ಟಿಂಗ್‍ನಲ್ಲಿ ಹಣ ಹೂಡಿ ಕಳೆದುಕೊಂಡಿದ್ದ. ಇದರಿಂದ ಬುದ್ದಿ ಕಲಿಯದ ಆರೋಪಿ ಬೆಟ್ಟಿಂಗ್ ಆಡಿಯೇ ಹೆಚ್ಚು ಹಣ ಗಳಿಸಬೇಕೆಂಬ ಹಪಾಹಪಿಗೆ ಬಿದ್ದು, ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಯಿಸಿದ್ದ ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ತಾನೇ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದ. ಆನ್‍ಲೈನ್ ಬೆಟ್ಟಿಂಗ್ ಆಡಲು ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ. ಕದ್ದಿದ್ದ 86 ಗ್ರಾಂ ಚಿನ್ನ ಪೈಕಿ ಸ್ನೇಹಿತನಿಗೆ 18 ಗ್ರಾಂ ಚಿನ್ನ ನೀಡಿದರೆ ಉಳಿದ ಚಿನ್ನವನ್ನು ಸ್ಕೂಟರ್‍ನಲ್ಲೇ ಇರಿಸಿಕೊಂಡಿದ್ದ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News