ಪುತ್ತೂರು: ಭಾರೀ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

Update: 2023-07-06 06:04 GMT

ಪುತ್ತೂರು: ಕಳೆದ 2 ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಪುತ್ತೂರು- ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ವರದಿಯಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಈ ಸೇತುವೆ ನಾಲ್ಕೈದು ಬಾರಿ ಮುಳುಗಡೆಯಾಗುತ್ತಿದ್ದು, ಈ ವರ್ಷದ ಮಳೆಗೆ ಗುರುವಾರ ಮುಂಜಾನೆ ಮೊದಲ ಬಾರಿಗೆ ಮುಳುಗಡೆಯಾಗಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಂಟ್ಯಾರ್ ನಲ್ಲಿ ತಿರುವು ಪಡೆದುಕೊಂಡು ರೆಂಜ ಮೂಲಕ ಸುತ್ತು ಬಳಸಿ ಸಾಗುತ್ತಿದೆ ಎಂದು ತಿಳಿದು ಬಂದಿದೆ.

ಮುಳುಗು ಸೇತುವೆ ಎಂದೇ ಕರೆಯಲ್ಪಡುವ ಚೆಲ್ಯಡ್ಕ ಸೇತುವೆಯು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದೀಗ ತೀರಾ ನಾದುರಸ್ತಿಯಲ್ಲಿದೆ. ಇಲ್ಲಿ ಸಮರ್ಪಕ‌ ಮೇಲ್ಸೇತುವೆ ನಿರ್ಮಿಸುವಂತೆ ಇಲ್ಲಿನ ಜನರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈಡೇರಿಕೆಯಾಗಿಲ್ಲ ಎಂಬ ಆರೋಪ ಈ ಭಾಗದ ಜನರಿಂದ ಕೇಳಿಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News