ಕರ್ನಾಟಕ ಸುರಕ್ಷಿತ ಕೈಗಳಲ್ಲಿದೆ: ಪ್ರಿಯಾಂಕ್ ಖರ್ಗೆ

Update: 2023-06-23 05:28 GMT

ಬೆಂಗಳೂರು: ಬಿಜೆಪಿಯ ಇತ್ತೀಚಿನ ಕೆಲವು ನಡೆಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಿಯ ಬಿಜೆಪಿಗರೇ, ಕೆಲವೊಂದು ಸಂಗತಿಗಳು: 50 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಇಲ್ಲದೆ ಸರ್ವಪಕ್ಷಗಳ ಸಭೆ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದರೆ, ನೀವು ಇನ್ನೂ ಅವರ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ನಿಮ್ಮ ಗೃಹ ಸಚಿವರು ಅಷ್ಟು ಅಸಮರ್ಥರೇ? ಡಾ.ಮನಮೋಹನ ಸಿಂಗ್ 156 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಏಕೆ ಇನ್ನೂ ಯಾವುದೇ ಪತ್ರಿಕಾಗೋಷ್ಠಿಗಳನ್ನು ನಡೆಸಲಿಲ್ಲ?ಎಂದು ಪ್ರಶ್ನಿಸಿದ್ದಾರೆ.

ಕೊನೆಯದಾಗಿ, ಕರ್ನಾಟಕದ ಬಗ್ಗೆ ಚಿಂತಿಸಬೇಡಿ, ರಾಜ್ಯವು ಸುರಕ್ಷಿತ ಕೈಗಳಲ್ಲಿದೆ. ಅಂದಹಾಗೆ ನೀವು ಯಾವಾಗ ವಿರೋಧ ಪಕ್ಷದ ನಾಯಕರನ್ನು ನೇಮಿಸುತ್ತೀರಿ? ಅಥವಾ ಬಿಎಲ್ಎಸ್ ಇನ್ನೂ ಗುಂಡು ಹಾರಿಸುತ್ತಿರುತ್ತಾರಾ? ಎಂದು ಟ್ವೀಟ್ ಮಾಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News