ಕಪ್ಪು ಸಮುದ್ರದಲ್ಲಿ ತೈಲ ಸೋರಿಕೆ: ರಶ್ಯದ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
Update: 2024-12-26 16:19 GMT
ಮಾಸ್ಕೋ; ಕಪ್ಪು ಸಮುದ್ರದಲ್ಲಿ ಹಾನಿಗೊಳಗಾದ ಟ್ಯಾಂಕರ್ ಹಡಗುಗಳಿಂದ ಸೋರಿಕೆಯಾಗಿರುವ ತೈಲವು ದಕ್ಷಿಣ ರಶ್ಯದ ಕ್ರಸ್ನೊಡೊರ್ ಪ್ರಾಂತದ ಕರಾವಳಿ ತೀರವನ್ನು ತಲುಪಿರುವ ಹಿನ್ನೆಲೆಯಲ್ಲಿ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಡಿಸೆಂಬರ್ 15ರಂದು ಕಪ್ಪು ಸಮುದ್ರದಲ್ಲಿ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರ್ ಹಡಗುಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದವು. ಒಂದು ಹಡಗು ಎರಡು ಹೋಳಾಗಿದ್ದರೆ, ಮತ್ತೊಂದು ಹಡಗಿಗೆ ಹಾನಿಯಾಗಿ ತೈಲ ಸೋರಿಕೆಯಾಗಿತ್ತು. ದುರಂತ ನಡೆದು 10 ದಿನಗಳ ಬಳಿಕವೂ ಕ್ರಸ್ನಡೋರ್ ಪ್ರಾಂತದ ಜನಪ್ರಿಯ ಪ್ರವಾಸೀ ತಾಣ ಅನಾಪ ಬೀಚ್‍ನತ್ತ ತೈಲವು ಹರಿದು ಬರುತ್ತಿದ್ದು ಸಮುದ್ರದ ಹಕ್ಕಿಗಳು, ಡಾಲ್ಫಿನ್‍ಗಳು, ಮೀನುಗಳಿಗೆ ಗಂಭೀರ ಸಮಸ್ಯೆ ತಂದೊಡ್ಡಿದೆ. ತೈಲದ ಹರಿವನ್ನು ಸ್ವಚ್ಛಗೊಳಿಸಲು ಸುಮಾರು 10,000 ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಪ್ರಾಂತೀಯ ಗವರ್ನರ್ ವೆನಿಯಾಮಿನ್ ಕೊಂಡ್ರಾಟಿಯೆವ್ ಹೇಳಿದ್ದು ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.