ಅನರ್ಹತೆಯಿಂದ ಪಾರಾಗಲು ಕಾನೂನು ತಜ್ಞರ ಜೊತೆ ಸಮಾಲೋಚಿಸಿದ್ದೇವೆ: ಛಗನ್ ಭುಜಬಲ್

Update: 2023-07-06 07:08 GMT

ಅಜಿತ್ ಪವಾರ್ ಅವರೊಂದಿಗೆ ಛಗನ್ ಭುಜಬಲ್, Photo: Twitter@NDTV

ಮುಂಬೈ: ಅನರ್ಹತೆಯಿಂದ ಪಾರಾಗಲು ಕಾನೂನು ತಜ್ಞರ ಸಮಾಲೋಚನೆ ನಡೆಸಿದ ನಂತರ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು  ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ.

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಭುಜಬಲ್, ಪೋಸ್ಟರ್ ಗಳಲ್ಲಿ ಶರದ್ ಪವಾರ್ ಅವರ ಫೋಟೋಗಳನ್ನು ಬಳಸಬೇಕೇ ಎಂಬುದರ ಕುರಿತು ಅಜಿತ್ ಪವಾರ್ ಮತ್ತು ಇತರ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.

ತನ್ನ ಅನುಮತಿಯೊಂದಿಗೆ ಹಾಗೂ ಅದೇ ಸಿದ್ಧಾಂತದ ಜನರು ಮಾತ್ರ ನನ್ನ ಫೋಟೊ ಬಳಸಬೇಕು ಎಂದು ಶರದ್  ಪವಾರ್ ಹೇಳಿದ ನಂತರವೂ ಅವರ ಫೋಟೋವನ್ನು ಬುಧವಾರ ಅಜಿತ್ ಪವಾರ್ ಅವರ ಬಣ ಭೇಟಿಯಾದ ವೇದಿಕೆಯ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದೆ.

42 ರಿಂದ 43 ಎನ್ ಸಿಪಿ ಶಾಸಕರು ಅಜಿತ್ ಪವಾರ್ ಅವರನ್ನು ಬೆಂಬಲಿಸಿ ಅಫಿಡವಿಟ್ ಗಳಿಗೆ ಸಹಿ ಮಾಡಿದ್ದಾರೆ ಎಂದು ಭುಜಬಲ್ ಹೇಳಿದರು.

ಅಜಿತ್ ಪವಾರ್ ನೇತೃತ್ವದಲ್ಲಿ ಸರಕಾರಕ್ಕೆ ಸೇರಲು ನಿರ್ಧರಿಸಿದಾಗ, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಎಂದು ಅವರು ಹೇಳಿದರು.

"ಎರಡರಿಂದ ನಾಲ್ಕು ತಜ್ಞರನ್ನು ಸಂಪರ್ಕಿಸಿದ ನಂತರ, ಅನರ್ಹತೆಯಿಂದ ಪಾರಾಗಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಸರಕಾರಕ್ಕೆ ಸೇರುವ ಮೊದಲು ಪಕ್ಷದ ಸಂವಿಧಾನ ಮತ್ತು ಚುನಾವಣಾ ನಿಯಮಗಳನ್ನು ಅನುಸರಿಸಲಾಗಿದೆ’’ ಎಂದು ಭುಜಬಲ್ ಹೇಳಿದರು.

ರವಿವಾರದ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂಬತ್ತು ಎನ್ ಸಿಪಿ ನಾಯಕರಲ್ಲಿ ಭುಜಬಲ್ ಕೂಡ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News