ಮಂಗಳೂರು: ಇನ್ ಲ್ಯಾಂಡ್ ಆಸ್ಕಾಟ್ ಗೆ ಶಿಲಾನ್ಯಾಸ
ಮಂಗಳೂರು, ಜು.6: ಇನ್ ಲ್ಯಾಂಡ್ ಬಿಲ್ಡರ್ ಮಂಗಳೂರಿನ ಏರ್ ಪೋರ್ಟ್ ರಸ್ತೆಯ ಬೊಂದೇಲ್ ಚರ್ಚ್ ಬಳಿ ನಿರ್ಮಿಸಲಿರುವ ' ಇನ್ ಲ್ಯಾಂಡ್ ಆಸ್ಕಾಟ್' ಆಧುನಿಕ ವಸತಿ ಸಮುಚ್ಚಯಕ್ಕೆ ಗುರುವಾರ ಸರ್ವ ಧರ್ಮ ಗಳ ಧರ್ಮ ಗುರುಗಳ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯಿತು.
ಸಮಾರಂಭದಲ್ಲಿ ಸೈಂಟ್ ಲಾರೆನ್ಸ್ ನ ಧರ್ಮ ಗುರು ವಂ.ಆಂಡ್ರೊ ಡಿ ಸೋಜ ಪ್ರಾರ್ಥಿಸಿದರು, ಧರ್ಮ ಗುರು ಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ ದುಆ ನೆರವೇರಿಸಿದರು .ಶರವು ದೇವಸ್ಥಾನದ ಅರ್ಚಕರಾದ ಗಿರಿಧರ ಭಟ್ ಶಿಲಾನ್ಯಾಸ ವಿಧಿಗಳನ್ನು ನೆರವೇರಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಎಸ್ ಸಿ ಡಿ ಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಕೈಪಿಡಿ ಬಿಡುಗಡೆಗೊಳಿಸಿದರು. ದಾಯ್ಜಿ ವರ್ಲ್ಡ್ ಪತ್ರಿಕೆ ಯ ಸಂಪಾದಕ ವಾಲ್ಟರ್ ನಂದಳಿಕೆ ಯೋಜನೆಯ ಕಚೇರಿ ಉದ್ಘಾಟಿಸಿದರು.
ಮೂಡಾ ಆಯುಕ್ತ ಮನ್ಸೂರ್ ಅಲಿ, ಉದ್ಯಮಿ ಮೇಘರಾಜ ಜೈನ್, ಭೂಮಿಯ ಮಾಲಕರಾದ ಗುಣಶೀಲ ಮತ್ತು ಸಹನಾ, ಇನ್ ಲ್ಯಾಂಡ್ ಗ್ರೂಪ್ ನ ನಿರ್ದೇಶಕರಾದ ಮೆಹರಾಜ್ ಯೂಸುಫ್, ವಹಾಜ್ ಯೂಸುಫ್, ಖ್ಯಾತ ವಾಸ್ತು ಶಿಲ್ಪಿ ಧರ್ಮ ರಾಜ್ ಉಪಸ್ಥಿತರಿದ್ದರು. ಇನ್ ಲ್ಯಾಂಡ್ ಗ್ರೂಪ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಸ್ವಾಗತಿಸಿದರು.
ಇನ್ ಲ್ಯಾಂಡ್ ಗ್ರೂಪ್ ನ ಮಾರುಕಟ್ಟೆ ಪ್ರತಿನಿಧಿ ಉಲ್ಲಾಸ್ ಕದ್ರಿ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾ, ಇನ್ ಲ್ಯಾಂಡ್ ಆಸ್ಕಾಟ್ ಅನ್ನು ಖ್ಯಾತ ವಾಸ್ತುಶಿಲ್ಪಿ ವಿನ್ಯಾಸ ಗೊಳಿಸಿದ್ದಾರೆ. ಈ ವಸತಿ ಸಮುಚ್ಚಯ 11 ಮಹಡಿಗಳಲ್ಲಿ 78 ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿರಲಿದೆ. ಕಟ್ಟಡವು ವಾರ್ಮ್ ಗೋಲ್ಡನ್ ಬ್ರೌನ್ ಮತ್ತು ಸ್ಟೀಲ್ ಬ್ಲೂ ಗ್ರೇ ವರ್ಣಗಳ ಮನಮೋಹಕ ಸಂಯೋಜನೆಯನ್ನು ಹೊಂದಿರಲಿದ್ದು, ನೆಲ ಮಹಡಿ ಯಲ್ಲಿ ಪ್ರೀಮಿಯಂ ವಾಣಿಜ್ಯ ಸ್ಥಳಗಳನ್ನು ಹೊಂದಿರಲಿದೆ. ಮೊದಲ ಮಹಡಿ ನಿವಾಸಿಗಳಿಗೆ ಸುಸಜ್ಜಿತ ಕ್ಲಬ್ ಹೌಸ್ ಇರಲಿದೆ. ವಿಶಾಲವಾದ ತಳಮಹಡಿಯಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಇದ್ದು, ವಸತಿ ಕಟ್ಟಡಕ್ಕೆ ಪ್ರತ್ಯೇಕ ಪ್ರವೇಶ ದ್ವಾರ, ಲಾಬಿಯನ್ನು ವಿನ್ಯಾಸಗೊಳಿಸಲಾಗುವುದು. ಎರಡು ಅತ್ಯಾಧುನಿಕ ಎಲಿವೇಟರ್ ಗಳು, ಉತ್ತಮ ಗುಣಮಟ್ಟದ ಫ್ಲೋರಿಂಗ್ ನ ವಿಶಾಲ ಕಾರಿಡಾರ್ ಗಳು ವಸತಿ ಸಮುಚ್ಚಯದಲ್ಲಿ ಇರಲಿವೆ ಎಂದು ತಿಳಿಸಿದರು.
ಇನ್ ಲ್ಯಾಂಡ್ ಆಸ್ಕಾಟ್ ನಲ್ಲಿ 1265, 1320, 1340, 1345 ಮತ್ತು 1380 ಚದರಡಿ (2 BHK), 1640, 1645, 1690 ಮತ್ತು 1810 ಚದರಡಿ (3 BHK) ಹಾಗೂ 3555 ಚದರಡಿ ವಿಸ್ತೀರ್ಣ (4BHK)ಗಳಲ್ಲಿ 2, 3 ಮತ್ತು 4 BHK ಅಪಾರ್ಟ್ ಮೆಂಟ್ ಗಳು ಗ್ರಾಹಕರ ಆಯ್ಕೆಗೆ ಲಭ್ಯವಿರಲಿದೆ. ಇನ್ ಲ್ಯಾಂಡ್ ಆಸ್ಕಾಟ್ ಯೋಜನಾ ಸ್ಥಳಕ್ಕೆ ಸಮೀಪವಾಗಿ ಸೈಂಟ್ ಲಾರೆನ್ಸ್ ಚರ್ಚ್, ಎರಡು ಉತ್ತಮ ಶಾಲೆಗಳು, ಪವಿತ್ರ ದೇವಸ್ಥಾನಗಳು, ಸೂಪರ್ ಮಾರ್ಕೆಟ್ ಗಳು, ಇಲೆಕ್ಟ್ರಾನಿಕ್ಸ್ ಮಳಿಗೆಗಳು ಇವೆ. ಇನ್ ಲ್ಯಾಂಡ್ ಆಸ್ಕಾಟ್ ಖರೀದಿದಾರರಿಗೆ ಪ್ರೀಮಿಯಂ ಕೊಡುಗೆ ಯಾಗಿದೆ. ನೀವು ಯಶಸ್ವಿ ವೃತ್ತಿಪರ, ಎನ್ಆರ್ ಐ, ಉದ್ಯಮಿ ಅಥವಾ ಉತ್ತಮ ಅಭಿರುಚಿ ಮತ್ತು ಪರಿಷ್ಕರಣೆಯ ವ್ಯಕ್ತಿಯಾಗಿದ್ದರೆ ಇನ್ ಲ್ಯಾಂಡ್ ಆಸ್ಕಾಟ್ ನಿಮಗಾಗಿ ತೆರೆಯಲಿದೆ ಎಂದು ಇನ್ ಲ್ಯಾಂಡ್ ಗ್ರೂಪ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದರು.
ಶಿಲಾನ್ಯಾಸದ ವಿಶೇಷ ಕೊಡುಗೆಯಾಗಿ ಮೊದಲ ಕೆಲವು ಗ್ರಾಹಕರಿಗೆ ಪ್ರೀ-ಲಾಂಚ್ ಬೆಲೆಯನ್ನು ನೀಡಲಿದ್ದೇವೆ. ಈ ಕೊಡುಗೆ ಜುಲೈ 31ರವರೆಗೆ ಇರಲಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಖರೀದಿದಾರರು ಮುಂದಾಗಬೇಕು ಎಂದು ಅವರು ವಿನಂತಿಸಿದ್ದಾರೆ.
ಸುಸಜ್ಜಿತ ಜಿಮ್ನೇಶಿಯಂ, ಮಕ್ಕಳಿಗಾಗಿ ಆಟದ ಸ್ಥಳದ ಜೊತೆಗೆ ಟೇಬಲ್ ಟೆನ್ನೀಸ್, ಕೇರಂ ಮತ್ತು ಇತರ ಬೋರ್ಡ್ ಗೇಮ್ ಗಳಿಗಾಗಿ ಒಳಾಂಗಣ ಕ್ರೀಡಾಂಗಣ, ಮಸಾಜ್ ಮತ್ತು ಸ್ಟೀಮ್ ರೂಮ್ ನೊಂದಿಗೆ ಸ್ಪಾ, ಯೋಗಕ್ಕಾಗಿ ಪ್ರತ್ಯೇಕ ಸ್ಥಳ ಇರಲಿದೆ. ವಿಶ್ರಾಂತಿ ಮತ್ತು ಹೊಸ ಚೈತನ್ಯಕ್ಕಾಗಿ ಲಾಂಜ್ ಮತ್ತು ಗ್ರಂಥಾಲಯವನ್ನು ಹೊಂದಿರಲಿದೆ. ಮಂಗಳೂರು, ಬೆಂಗಳೂರು, ಪುತ್ತೂರು ಮತ್ತು ಉಳ್ಳಾಲದಲ್ಲಿ ಪೂರ್ಣಗೊಂಡ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳೊಂದಿಗೆ ಇನ್ ಲ್ಯಾಂಡ್ ಕರ್ನಾಟಕದಲ್ಲಿ ಮನೆಮಾತಾಗಿದೆ. ಶೀಘ್ರದಲ್ಲೇ ಮಣ್ಣಗುಡ್ಡ (ಮಂಗಳೂರು), ಯಲಹಂಕ ನ್ಯೂ ಟೌನ್ (ಬೆಂಗಳೂರು) ಮತ್ತು ಮೈಸೂರಿನಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಇನ್ ಲ್ಯಾಂಡ್ ಆಸ್ಕಾಟ್ ಈಗಾಗಲೇ ತನ್ನ ರೇರಾ ನೋಂದಣಿಯನ್ನು ಪಡೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.