ಚಿಕ್ಕಮಗಳೂರು: ನೂತನ‌‌ ಜಿಲ್ಲಾಧಿಕಾರಿ‌ಯಾಗಿ ಮೀನಾ ನಾಗರಾಜ್ ನೇಮಕ

Update: 2023-06-28 06:32 GMT

ಚಿಕ್ಕಮಗಳೂರು: ನೂತನ‌‌ ಜಿಲ್ಲಾಧಿಕಾರಿ‌ಯಾಗಿ ಮೀನಾ ನಾಗರಾಜ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎನ್.ರಮೇಶ್ ಅವರನ್ನು ವರ್ಗಾವಣೆ ಮಾಡಿದೆ. ಆದೇಶ ಮಾಡಿದೆ.

ಮೀನಾ ನಾಗರಾಜ್,‌ ಈ ಹಿಂದೆ ಮಾಹಿತಿ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿ ಸಂಸ್ಥೆ ನಿರ್ದೇಶಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ  ಎಂದು ತಿಳಿದು ಬಂದಿದೆ.

ಜಿ.ಪಂ.ಸಿಇಓ  ಜಿ.ಪ್ರಭು ಅವರನ್ನು ತುಮಕೂರು ಜಿಲ್ಲೆ ಜಿ.ಪಂ.ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿ.ಪಂ.ಸಿಇಓ ಹುದ್ದೆ ಕಾಯ್ದಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News