ಕೆ.ಸಿ ರೋಡ್: ಜಲಾವೃತಗೊಂಡ ಕಟ್ಟಡದ ಕೆಳಮಹಡಿ; ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಕುಟುಂಬಗಳು

Update: 2023-07-06 08:50 GMT

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಸಿರೋಡ್ ನಲ್ಲಿರುವ ಮೆಟ್ರೋ ಪ್ಲಾಝಾ ಕಟ್ಟಡದ ಕೆಳ ಮಹಡಿ ಜಲಾವೃತ ಗೊಂಡಿರುವ ಬಗ್ಗೆ ವರದಿಯಾಗಿದೆ.

ಮಳೆ ನೀರಿನಿಂದ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಕಾರ್ ಅರ್ಧ ಮುಳುಗಿದ್ದು , ಶೌಚಾಲಯದೊಳಗೆ ನೀರು ತುಂಬಿದೆ. ಕೆಳಭಾಗದಲ್ಲಿ ನೀರು ತುಂಬಿದ ಕಾರಣ ಈ ಕಟ್ಟಡದಲ್ಲಿ ಬಾಡಿಗೆಗೆ ವಾಸವಿರುವ ಕುಟುಂಬ ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ಇಲ್ಲದೇ ಪರಿತಪಿಸುವಂತಾಗಿದೆ ಎಮದು ತಿಳಿದು ಬಂದಿದೆ.

ಈ ಕಟ್ಟಡದಲ್ಲಿ ವಾಸವಾವರುವ 16 ಕುಟುಂಬಗಳು ಮಳೆಯಿಂದಾಗಿ ತತ್ತರಿಸಿ ಹೋಗಿವೆ. ಮಳೆ ನೀರು ಜೊತೆ ಶೌಚಾಲಯ ನೀರು ಕುಡಿಯುವ ನೀರಿನ ಜೊತೆ ಮಿಶ್ರಣ ಗೊಂಡಿವೆ. ಇದರಿಂದ ಈ ನೀರು ಕುಡಿಯಲು ಅಯೋಗ್ಯ ವಾಗಿದೆ .ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ.ಆದರೆ ಸ್ಪಂದನ ಮಾತ್ರ ಸಿಕ್ಕಿಲ್ಲ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು .ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಈ ನೀರು ಕುಡಿಯಬಾರದು ಎಂದು ಸೂಚಿಸಿದ್ದಾರೆ.ಆರೋಗ್ಯ ಕೆಟ್ಟು ಹೋದರೆ ಹೋಣೆ ವಹಿಸುವವರು ಯಾರಿದ್ದಾರೆ ಎಂದು ಈ ಕಟ್ಟಡದಲ್ಲಿ ವಾಸವಿರುವ ಶಬೀರ್ ಕುಟುಂಬ ವಾರ್ತಾ ಭಾರತಿ ಜೊತೆ ಅಳಲು ತೋಡಿಕೊಂಡಿದೆ.

ಒಟ್ಟಾರೆಯಾಗಿ ವಿಪರೀತ ಮಳೆ ಯಿಂದಾಗಿ ಈ ಕಟ್ಟಡದಲ್ಲಿ ವಾಸವಿರುವ ಕುಟುಂಬದ ಬದುಕು ಕಂಗಾಲಾಗಿದೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ 10ಗಂಟೆಯಿಂದ ಹೋದ ವಿದ್ಯುತ್ ಈವರೆಗೆ ಬಂದಿಲ್ಲ.ನಾವು ಆಹಾರಕ್ಕಾಗಿ ಎಲ್ಲಿ ಹೋಗಬೇಕು? ಈ ಕಟ್ಟಡದಲ್ಲಿ ವಾಸವಿರುವ ಕುಟುಂಬ ಗಳಿಗೆ ಪ್ರತ್ಯೇಕ ವಾಸ ಮಾಡಿ ಕೊಡಲಿ ಎಂದು ಈ ಕಟ್ಟಡದಲ್ಲಿ ವಾಸವಿರುವ ಹಮೀದ್ ತಮ್ಮ ಅಳಲು ತೋಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News