ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ ; ರೌಡಿಶೀಟ್‌ ತೆರೆಯುವ ಬಗ್ಗೆ ನೋಟಿಸ್‌

Update: 2024-11-29 06:41 GMT

ತುಮಕೂರು : ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೊಸ್ಟ್‌ ಹಾಕಿದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರನ್ನು ತುಮಕೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶಕುಂತಲಾ ನಟರಾಜ್ ವಿರುದ್ಧ ನ.24ರಂದು ಮೊನಂ 191/2024 ಕಲಂ 299 ಬಿಎನ್ಎಎಸ್ ರೀತ್ಯಾ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಹಿನ್ನಲೆ ಪೊಲೀಸ್ ಕಾನ್ಸಟೇಬಲ್ ಉಮಾಶಂಕರ್ ದೂರು ನೀಡಿದ್ದರು. ಅದರಂತೆ ಶಕುಂತಲಾ ನಟರಾಜ್ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

ಘಟನೆ ಸಂಬಂಧ ಶುಕ್ರವಾರ ಶಕುಂತಲಾ ನಟರಾಜ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರೌಡಿ ಶೀಟರ್ ತೆರೆಯುವ ಬಗ್ಗೆ ನೋಟಿಸ್ :

ಶಕುಂತಲಾ ನಟರಾಜ್ ಅವರಿಗೆ ರೌಡಿ ಶೀಟರ್ ತೆರೆಯುವ ಬಗ್ಗೆ ನೋಟಿಸ್ ಕೂಡ ಪೊಲೀಸರು ನೀಡಿದ್ದಾರೆ. ನೋಟಿಸ್‌ನಲ್ಲಿ ದಿನಾಂಕ:10-10- 2023 ರಂದು ರಾತ್ರಿ 20-14 ಗಂಟೆಗೆ ನಿಮ್ಮ ಟ್ವಿಟ್ಟರ್ ಖಾತೆ ಮೂಲಕ "ಭಾರತದ ಭಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿರಬಾರದು ಅನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ?@ DKShivakumar #BoucutulumallBengaluru' ಎಂದು ಪೋಸ್ಟ್ ಮಾಡಿರುವ ವಿಚಾರದಲ್ಲಿ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ದರಿಂದ ನೀವು ನಿಮ್ಮ ಎಕ್ಸ್‌ ಖಾತೆಯ ಮೂಲಕ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲಿ ಹಾಕಿ ಜನರ ಭಾವನೆಗಳನ್ನು ಕೆರಳಿಸುವಂತಹ ಚಟುವಟಿಕೆವುಳ್ಳವರಾಗಿರುವುದರಿಂದ ನಿಮ್ಮ ಮೇಲೆ ನಿಗಾ ವಹಿಸಲು ಏಕೆ ರೌಡಿ ಶೀಟನ್ನು ತೆರೆಯಬಾರದು ಎಂಬುದಕ್ಕೆ ಈ ನೋಟಿಸ್‌ ಜಾರಿಯಾದ ಏಳು ದಿನಗಳ ಒಳಗಾಗಿ ನಿಮ್ಮ ಉತ್ತರ ನೀಡಲು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News