ಇಂದ್ರಾಳಿ ಸೇತುವೆ ಜ.15ರೊಳಗೆ ಪೂರ್ಣಗೊಳಿಸುವ ಬಗ್ಗೆ ಮುಚ್ಚಳಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿಯಿಂದ ಕಾಮಗಾರಿ ಪರಿಶೀಲನೆ

Update: 2024-10-23 14:36 GMT

ಉಡುಪಿ: ಇಂದ್ರಾಳಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಎಲ್ಲ ಸಲಕರಣೆಗಳು ಬಂದಿದ್ದು, ಈಗಾಗಲೇ ವಿಳಂಬವಾಗಿ ರುವುದರಿಂದ ಈ ಕಾಮ ಗಾರಿಯನ್ನು ಜ.15ರೊಳಗೆ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಮಾಡಿಕೊಳ್ಳಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾ ಡುತಿದ್ದರು. ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬದಿಂದಾಗಿ ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತ ಟೀಕೆ ಟಿಪ್ಪಣಿಗಳನ್ನು ಗಮನಿಸುತ್ತಿದ್ದೇವೆ ಎಂದರು.

2018ರಲ್ಲಿ ಆರಂಭವಾದ ಕಾಮಗಾರಿಯು ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಆಗ 38 ಮೀಟರ್ ಸೇತುವೆ ಉದ್ದ ಈಗ 58 ಮೀಟರ್‌ಗೆ ಹೆಚ್ಚಿಸಲಾಗಿದೆ. ಸಿವಿಲ್ ಕಾಮಗಾರಿ ಸೇರಿದಂತೆ ಸೇತುವೆಯ ಒಟ್ಟು ವೆಚ್ಚ 13ಕೋಟಿ ರೂ. ಆಗಿದೆ. ಈ ಹಿಂದೆ ಸೇತುವೆಗೆ 138 ಟನ್ ಕರ್ಡರ್‌ಗಳ ಸ್ಟೀಲ್ ಬೇಕಾಗಿತ್ತು. ಈಗ ಅದರ ಪ್ರಮಾಣ 420 ಟನ್‌ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

ಸೇತುವೆ ಕಾಮಗಾರಿ ಸಂಬಂಧ ನಾನು ಹಲವು ಬಾರಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅದೇ ರೀತಿ ಡಿಸಿ ಎಸ್ಪಿಯವರ ಸಮಕ್ಷಮದಲ್ಲಿಯೂ ಸಭೆ ನಡೆಸಿ, ಜ.15ರೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾ ಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಂದೆರೆಡು ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಿ ಜ.15ರೊಳಗೆ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಕಠಿಣ ಕ್ರಮ ತೆಗೆದು ಕೊಳ್ಳಲಾಗಿದೆ. ಇದು ಬಹಳ ಸೂಕ್ಷವಾದ ಕಾಮಗಾರಿ ಆಗಿರುವುದರಿಂದ ಎಲ್ಲ ಕಾಮಗಾರಿಗಳನ್ನು ರೈಲ್ವೆ ಇಲಾಖೆಯ ಕಣ್ಗಾವಲಿನಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಈ ಕಾಮಗಾರಿಗಳ ಬಗ್ಗೆ ಸಹಜವಾಗಿ ಟೀಕೆ ಟಿಪ್ಪಣಿಗಳು, ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಪ್ರಜಾ ಪ್ರಭುತ್ವದಲ್ಲಿ ಯಾರೇ ಟೀಕೆ ಮಾಡಿ ದರೂ ಅದಕ್ಕೆ ಉತ್ತರ ಕೊಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆ. ನಾನು ಮತ್ತು ಶಾಸಕರು ಇದನ್ನು ಹಿಂಬಾಲಿಸುತ್ತಿದ್ದೇವೆ. ರೈಲ್ವೆ ಇಲಾಖೆಯಿಂದ ಅನು ಮತಿ ದೊರೆಯುವಾಗ ತುಂಬಾ ವಿಳಂಬವಾಗಿದೆ ಎಂದು ಅವರು ತಿಳಿಸಿದರು.

‘ಸಂತೆಕಟ್ಟೆ ಬಂಡೆ ಸ್ಪೋಟಕ್ಕೆ ತಡೆಯಾಜ್ಞೆ’

ಸಂತೆಕಟ್ಟೆ ಅಂಡರಪ್‌ಪಾಸ್ ಕಾಮಗಾರಿ ಮೊದಲಿಗಿಂತ ತೀವ್ರ ವೇಗ ಪಡೆದುಕೊಂಡಿದೆ. ಬಂಡೆಗಳನ್ನು ಸ್ಪೋಟ ಮಾಡು ವುದರಿಂದ ಕಟ್ಟಡಕ್ಕೆ ಹಾನಿ ಯಾಗುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರಲಾಗಿದೆ. ಅದ ಕ್ಕಾಗಿ ಡ್ರಿಲ್ಲಿಂಗ್ ಮೂಲಕವೇ ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೋರ್ಟ್ ಕೇವಲ ಒಂದು ವರ್ಷಕ್ಕೆ ಮಾತ್ರ ತಡೆಯಾಜ್ಞೆ ಕೊಟ್ಟಿತ್ತು. ಈಗ ಭೂಮಾಲಕರು ಸಲ್ಲಿಸಿರುವ ದಾವೆ ಕೋರ್ಟ್‌ನಲ್ಲಿ ವಜಾ ಆಗಿದೆ. ಅ.23ರಂದು ಭೂಸಂತ್ರಸ್ತರಿಗೆ ಪರಿಹಾರಕ್ಕಾಗಿ ದಾಖಲೆ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅದರ ಬಳಿಕ ಹೆದ್ದಾರಿ ಇಲಾಖೆ ಯವರು ಕಾಮಗಾರಿ ನಡೆಸಲು ನ್ಯಾಯಾಲಯ ಅನುಮತಿ ಕೊಡುತ್ತದೆ. ಸದ್ಯದಲ್ಲೇ ಈ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.

ಪೆರ್ಡೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಪೆರ್ಡೂರು ದೇವಳಕ್ಕೆ ತೊಂದರೆ ಆಗುತ್ತದೆ ಎಂಬ ದೂರುಗಳು ಬರುತ್ತಿವೆ. ದೇವಳಕ್ಕೆ ಯಾವುದೇ ತೊಂದರೆ ಆಗದಂತೆ ರಸ್ತೆಯನ್ನು ನಿರ್ಮಾಣ ಮಾಡುವ ಕುರಿತು ನಿರ್ಣಯಕ್ಕೆ ಬಂದಿ ದ್ದೇವೆ. ಭಕರ‌್ತರು ಮತ್ತು ಅಕ್ಕಪಕ್ಕದ ಕಟ್ಟಡ ಮಾಲಕರು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News