ದಲಿತ ದೌರ್ಜನ್ಯ ಪ್ರಕರಣಗಳಿಗಾಗಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಲು ದ.ಸಂ.ಸ. ಮನವಿ

Update: 2024-10-23 17:06 GMT

ಇಂದು ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಈ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಕಂಡುಕೊಳ್ಳಲು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದಲಿತ ದೌರ್ಜನ್ಯ ಪ್ರಕರಣಗಳಿಗಾಗಿ ವಿಶೇಷ ಪತ್ಯೇಕ ಪೋಲಿಸ್ ಠಾಣೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯ ಮಂತ್ರಿ ಸಿಧ್ಧರಾಮಯ್ಯ ರವರಿಗೆ ಮನವಿ ಸಲ್ಲಿಸಿತು.

ಮನವಿಯನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿಯವರು ಸ್ವೀಕರಿಸಿದರು. ನಿಯೋಗದಲ್ಲಿ ದ.ಸಂ.ಸ. ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ದ.ಸಂ.ಸ.ಜಿಲ್ಲಾ ಮುಖಂಡರಾದ ಮಂಜುನಾಥ ಗಿಳಿಯಾರು , ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಪ್ರೋ.ಫಣಿರಾಜ್ , ಇದ್ರಿಸ್ ಹೂಡೆ , ಕುಮಾರ್ ಕೋಟ , ಕೀರ್ತಿ ಪಡುಬಿದ್ರಿ , ಶಿವಾನಂದ ಮೂಡುಬೆಟ್ಟು , ಸುರೇಶ ಬಾರ್ಕೂರು , ವಿಠಲ ತೊಟ್ಟಂ , ಗೋಪಾಲಕೃಷ್ಣ ನಾಡ , ವಿಠಲ ಕೊಡಂಕೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News