ಮಲ್ಪೆ| ಡ್ರಗ್ಸ್ ಪಾರ್ಸೆಲ್ ಕಳುಹಿಸಿರುವುದಾಗಿ ಬೆದರಿಸಿ 20 ಲಕ್ಷ ರೂ. ಆನ್‌ಲೈನ್ ವಂಚನೆ

Update: 2024-11-13 15:35 GMT

ಮಲ್ಪೆ, ನ.13: ಡ್ರಗ್ಸ್ ಪಾರ್ಸೆಲ್ ಕಳುಹಿಸಿರುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ 20ಲಕ್ಷ ರೂ. ಖಾತೆಗೆ ವರ್ಗಾಯಿಸಿ ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧನುಷ್ ಎಂಬವರಿಗೆ ನ.7ರಂದು ಅಪರಿಚಿತ ವ್ಯಕ್ತಿ ಕೋರಿಯರ್ ಕಂಪನಿಯಿಂದ ಕರೆ ಮಾಡಿರುವುದಾಗಿ ಹೇಳಿ, ನೀವು ಕಳಿಸಿರುವ ಪಾರ್ಸೆಲ್‌ನಲ್ಲಿ ಬಟ್ಟೆ, ಪಾಸ್‌ಪೋರ್ಟ್, ಡೆಬಿಟ್ ಕಾರ್ಡ್, ಲ್ಯಾಪ್‌ಟಾಪ್, ಎಂಡಿಎಂಎ ಡ್ರಗ್ಸ್ ಇದ್ದು ಆ ಪಾರ್ಸೆಲ್ ಮುಂಬೈಯ ಎನ್‌ಸಿಬಿ ಅವರ ಬಳಿ ಇದೆ. ನೀವು ಅರ್ಮನ್ ಅಲಿಗೆ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದರು.

ಇದಕ್ಕೆ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ವಿಡಿಯೋ ಕಾಲ್‌ಗೆ ಬರುವಂತೆ ತಿಳಿಸಿದರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸು ವುದಾಗಿ ತಿಳಿಸಿ ಧನುಷ್ ಅವರಲ್ಲಿ ಬ್ಯಾಂಕ್‌ನ ಖಾತೆಯ ಅಪ್ಲಿಕೇಶನ್ ಲಾಗಿನ್ ಆಗಲು ಸೂಚಿಸಿ ಪರ್ಸನಲ್ ಲೋನ್ ಸೆಕ್ಷನ್‌ನಲ್ಲಿ 20 ಲಕ್ಷ ವಂಚನೆಯ ಹಣ ಇದ್ದು 20 ಲಕ್ಷ ಹಣವನ್ನು ತಮ್ಮ ಖಾತೆಗೆ ಜಮಾವಣೆ ಮಾಡಿಕೊಳ್ಳುವಂತೆ ಸೂಚಿಸಿದರು. ಅದನ್ನು ನಂಬಿ 20ಲಕ್ಷ ರೂ. ಹಣವನ್ನು ಧನುಷ್ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News