ಉಡುಪಿ: ಅ.25ರಿಂದ ಸ್ಥಳೀಯ ಸಂಸ್ಥೆಗಳ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ

Update: 2024-10-24 14:20 GMT

ಉಡುಪಿ: ಸ್ಥಳೀಯ ಸಂಸ್ಥೆಗಳಾದ ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕೆಳಕಂಡ ದಿನಾಂಕಗಳಂದು ನಿಗದಿ ಪಡಿಸಲಾದ ಸ್ಥಳಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ (ನಗರ)ಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಉಡುಪಿ ನಗರಸಭಾ ವ್ಯಾಪ್ತಿ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ (ನಗರ)ಯನ್ನು ಅ.25ರಂದು ನಗರಸಭೆ ಉಪಕಚೇರಿ ಮಣಿಪಾಲ ಇಲ್ಲಿ ನಡೆಯಲಿದೆ. ಮಾತಿಹಿಗಾಗಿ ಹರೀಶ್ ಬಿಲ್ಲವ ಮೊ.ನಂ: 9535052544, ಅ.26ರಂದು ನಗರಸಭೆ ಉಪಕಚೇರಿ ಚಿಟ್ಪಾಡಿ ಮಾಹಿತಿ ಗಾಗಿ ಸುರೇಂದ್ರ ಹೋಬಳಿದಾರ ಮೊ.ನಂ: 9739296004,ಅ.28ರಂದು ನಗರಸಭೆ ಉಪ ಕಚೇರಿ ಪುತ್ತೂರು ಹಾಗೂ ಅ.29ರಂದು ನಗರಸಭೆ ಉಪಕಚೇರಿ ಮಲ್ಪೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗುರುತಿಸುವಿಕೆಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮಾಹಿತಿಗಾಗಿ ಮನೋಹರ ಮೊ.ನಂ: 8660368198ನ್ನು ಅಥವಾ ನಗರಸಭೆ ಕಚೇರಿಯನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ.

ಕುಂದಾಪುರ ಪುರಸಭೆ: ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ (ನಗರ)ಯನ್ನು ಅ.25ರಂದು ಕುಂದಾಪುರ ಪುರಸಭಾ ಕಚೇರಿ, ಅ. 27ರಂದು ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿ, ಅ.28ರಂದು ಡಾ. ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಅ.29ರಂದು ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ 10:30 ರಿಂದ ಸಂಜೆ 5:00 ರವರೆಗೆ ಗುರುತಿಸುವಿಕೆಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕುಂದಾಪುರ ಪುರಸಭಾ ಕಚೇರಿ ಅಥವಾ ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಎಂ. ನಾಯ್ಕ್ ಮೊ.ನಂ: 6360027331 ಅಥವಾ 7353255268 ಅನ್ನು ಸಂಪರ್ಕಿಸಬಹುದು.

ಕಾಪು ಪುರಸಭೆ: ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ (ನಗರ)ಯನ್ನು ಅ.25ರಂದು ಪಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅ.28ರಂದು ಉಳಿಯಾರಗೋಳಿ ದಂಡತೀರ್ಥ ಶಾಲೆ ಹತ್ತಿರದ ಹಾಲಿನ ಡೈರಿ ಕಟ್ಟಡ (ಮೊದಲನೇ ಮಹಡಿ), ಅ.29ರಂದು ಅಹ್ಮದಿ ಮೊಹಲ್ಲಾ ಅಂಗನವಾಡಿ ಕೇಂದ್ರ ಮತ್ತು ಅ.30ರಂದು ರಾಣ್ಯಕೇರಿ ಕನ್ನಡ ಜನರಲ್ ಶಾಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5:00ರವರೆಗೆ ಗುರುತಿಸುವಿಕೆ ಶಿಬಿರಗಳನ್ನು ಆಯೋಜಿಸಲಾ ಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಪು ಪುರಸಭೆ ಕಚೇರಿ ಅಥವಾ ಮೊ.ನಂ: 9036465789ನ್ನು ಸಂಪರ್ಕಿಸಬಹುದು.

ಸಾಲಿಗ್ರಾಮ ಪಟ್ಟಣ ಪಂಚಾಯತ್: ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ (ನಗರ)ಯನ್ನು ಅ.25 ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ, ಅ.28ರಂದು ಕಾರ್ಕಡ ಗ್ರಂಥಾಲಯ ಕಚೇರಿ ಹಾಗೂ ಅ.29 ಮತ್ತು 30 ರಂದು ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗುರುತಿಸುವಿಕೆಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಅಥವಾ ಮೊ.ನಂ: 8618628500ನ್ನು ಸಂಪರ್ಕಿಸಬಹುದು.

ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವ, ಅನೈರ್ಮಲ್ಯ ಶೌಚಾಲಯ ಗಳಿಂದ ಹೊರಹೋಗಿ ತೆರೆದ ಚರಂಡಿಯಲ್ಲಿ ಸಂಗ್ರಹವಾಗುವ ಮಾನವ ಮಲವನ್ನು ಸ್ವಚ್ಛಗೊಳಿಸುವ ಹಾಗೂ ಶೌಚಾಲಯದ ಮಲ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯದಲ್ಲಿ ತೊಡಗಿರುವವರು ಮೇಲ್ಕಂಡ ಸ್ಥಳಗಳಲ್ಲಿ ಆಯೋಜಿಸಿರುವ ಸಮೀಕ್ಷೆ ಮತ್ತು ಗುರುತಿಸುವಿಕೆಯ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸುವಂತೆ ಸೂಚಿಸಲಾಗಿದೆ.

ಬರುವಾಗ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಕುಟುಂಬದ ಸದಸ್ಯರು ಗಳನ್ನು ಒಳಗೊಂಡ ಭಾವಚಿತ್ರ, ಬ್ಯಾಂಕ್ ಖಾತೆಯ ಪ್ರತಿ, ಆಧಾರ್ ಪ್ರತಿ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯ ಸ್ಥಳದ ವಿವರಗಳೊಂದಿಗೆ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಸ್ಥಳೀಯ ಸಂಸ್ಥೆಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News