ಅಕ್ರಮ ದಾಸ್ತಾನು ಆರೋಪ: 40ಕೆ.ಜಿ. ಪಟಾಕಿ ವಶಕ್ಕೆ
Update: 2024-10-16 15:45 GMT
ಉಡುಪಿ, ಅ.16: ನಗರದ ಜಿಟಿಎಸ್ ಶಾಲೆಯ ಎದುರು ವಿದ್ಯಾಜ್ಯೋತಿ ಬಿಲ್ಡಿಂಗ್ನ ಕಾಬ್ರಾಲ್ ಗನ್ಹೌಸ್ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಡುಮದ್ದುಗಳನ್ನು ಪೊಲೀಸರು ಅ.15ರಂದು ದಾಳಿ ನಡೆಸಿ ವಶಪಡಿಸಿ ಕೊಂಡಿದ್ದಾರೆ.
ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿದ ಪೊಲೀಸರು, ರೋನಾಲ್ಡ್ ಜಿ ಕಾಬ್ರಾಲ್ ಎಂಬಾತ ದೀಪಾವಳಿ ಹಬ್ಬದ ಪ್ರಯುಕ್ತ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಒಟ್ಟು 40 ಕೆ ಜಿ ತೂಕದ ಪಟಾಕಿ ಸುಡು ಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.