ಉಡುಪಿ ವಲಯದಲ್ಲಿ ಮೀಫ್ ಸಂಸ್ಥೆಯ ಸರಣಿ ಕಾರ್ಯಕ್ರಮಗಳು

Update: 2024-10-16 17:12 GMT

ಉಡುಪಿ : ಮುಸ್ಲಿಂ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಫೆಡರೇಶನ್ (ಮೀಫ್ ) ದ.ಕ. ಹಾಗೂ ಉಡುಪಿ ಇದರ ಮೂರು ಕಾರ್ಯಕ್ರಮಗಳು ಹೆಜಮಾಡಿ ಅಲ್ ಆಜ್ಹರ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಯೋಜಕತ್ವದಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು.

ಸಭಾಧ್ಯಕ್ಷತೆಯನ್ನು ಮೀಫ್ ಸಂಸ್ಥೆಯ ಉಪಾಧ್ಯಕ್ಷರಾದ ಶಬೀ ಅಹ್ಮದ್ ಖಾಝಿ ವಹಿಸಿದರು. ಅಲ್ ಆಜ್ಹರ್ ಸಂಸ್ಥೆಯ ಸಂಚಾಲಕ ಕೆ. ಎಸ್ ಶೇಕಬ್ಬ ಕೋಟೆ ಸ್ವಾಗತಿಸಿದರು. ಮೀಫ್ ಸಂಸ್ಥೆಯ ಕಾರ್ಯಕ್ರಮಗಳ ಕಾರ್ಯದರ್ಶಿ ಮೊಹಮ್ಮದ್ ಶಾರಿಕ್ ಪ್ರಸ್ತಾವಿಕ ಭಾಷಣ ಗೈದರು.

ಕಾಪು ತಹಶೀಲ್ದಾರ್ ಡಾ.‌ ಆರ್. ಪ್ರತಿಭಾ ಅವರು ಗಿಡಕ್ಕೆ ನೀರು ಹೊಯ್ದು ಕಾರ್ಯಗಾರದ ಉದ್ಘಾಟನೆಗೈದರು.

ಪ್ರತಿಭಾ ಅವರು ತಮ್ಮ ಭಾಷಣದಲ್ಲಿ ಮುಖ್ಯವಾಗಿ ಸಮಾಜ, ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರವನ್ನು ಎತ್ತಿ ಹಿಡಿದರು.

ಮುಖ್ಯ ಅತಿಥಿಗಳಾಗಿ ಆಜ್ಹರ್ ಸಂಸ್ಥೆಯ ಅಧ್ಯಕ್ಷರಾದ ಎಚ್. ಬಿ. ಮೊಹಮ್ಮದ್, ಕಾರ್ಯದರ್ಶಿ ಗಳಾದ ಎಂ. ಐ. ಮೊಹಮ್ಮದ್, ಸದಸ್ಯರಾದ ಅಬ್ದುಲ್ ಅಝೀಝ, ಅಬ್ದುಲ್ ಖಾದರ್ ಹಾಮ್ಮಬ್ಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೀಫ್ ಅಧ್ಯಕ್ಷ ಮೂಸಬ್ಬಾ ಪಿ. ಬ್ಯಾರಿ ಶೈಕ್ಷಣಿಕ ಸಂಸ್ಥೆಯ ಕಚೇರಿಗಳಲ್ಲಿ ಕಡತಗಳ ಜೋಡಣೆ, ರೀತಿ ನೀತಿಗಳ ವಿವರ ಗಳನ್ನು ಸವಿಸ್ತಾರವಾಗಿ ಪ್ರಥಮ ಕಾರ್ಯಾಗಾರದಲ್ಲಿ ವಿವರಿಸಿದರು.

ದ್ವಿತೀಯ ಕಾರ್ಯಗಾರದಲ್ಲಿ ಶೈಕ್ಷಣಿಕ ಹಾಗೂ ಇತರ ಸಂಸ್ಥೆ ಗಳಲ್ಲಿ ಸಭೆಗಳನ್ನು ಯಾವ ರೀತಿ ನಡೆಸುವುದು ಎಂಬ ಸಂಪೂರ್ಣ ನಿಯಮಗಳನ್ನು ಎಚ್. ಜಿ. ಎಫ್ ಜೇಸಿ ಹಸ್ಸನ್ ವಿಟ್ಲ ವಿವರಿಸಿದರು.

ತೃತೀಯ ಕಾರ್ಯಗಾರದಲ್ಲಿ ಅಡ್ವಕೇಟ್ ಓಮರ್ ಫಾರೂಕ್ ರವರು ವಿದ್ಯಾ ಸಂಸ್ಥೆಗಳು ಎದುರಿಸುತ್ತಿರುವ ಗ್ರಾಚುಟಿ ಸಮಸ್ಯೆ ಬಗ್ಗೆ ವಿದ್ಯಾ ಸಂಸ್ಥೆ ಗಳ ಆಡಳಿತ ಸಮಿತಿ ಮುಖ್ಯಸ್ಥರುಗಳಿಗೆ ವಿವರಿಸಿದರು.

ಕಾರ್ಯಾಗಾರದಲ್ಲಿ ಮೀಫ್ ಉಡುಪಿ ವಲಯದ ವಿವಿಧ ವಿದ್ಯಾಸಂಸ್ಥೆಗಳ 75 ಪ್ರತಿನಿಧಿಗಳು ಭಾಗವಸಿದ್ದರು.

ಕೊನೆಯಲ್ಲಿ ಮೀಫ್ ಸಂಸ್ಥೆಯ ಕಚೇರಿ ಕಾರ್ಯದರ್ಶಿ ಜಿ. ಎಂ. ಅನ್ವರ್ ಹುಸೇನ್ ಧನ್ಯವಾದ ಅರ್ಪಿಸಿದರು. ಪರ್ವೀಝ ಅಲಿ ಕಾರ್ಯಕ್ರಮ ನಿರೂಪಿಸಿದರು.








Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News