ಅ.10ರಂದು ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

Update: 2023-10-06 13:02 GMT

ಉಡುಪಿ : ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅ.10ರಂದು ಮಂಗಳೂರಿನ ಪ್ರತಿಷ್ಠಿತ ಗ್ಲೋ ಟಚ್ ಟೆಕ್ನಾಲಜೀಸ್ ನೇರ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಸಲಿದೆ.

ಈಗಾಗಲೇ ಬಿಎಸ್ಸಿ, ಬಿಸಿಎ, ಎಂಸಿಎ, ಎಂಎಸ್ಸಿ, ಬಿಇ (ಸಿವಿಲ್ ಮತ್ತು ಮೆಕ್ಯಾನಿಕಲ್ ಹೊರತುಪಡಿಸಿ), ಬಿಕಾಂ (ಕಂಪ್ಯೂಟರ್ ಅಫ್ಲಿಕೇಶನ್) ಮುಗಿಸಿಕೊಂಡಿರುವ ಅಭ್ಯರ್ಥಿಗಳು ಪೂರ್ವಾಹ್ನ ೯:೩೦ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.

ಆಯ್ಕೆ ಪ್ರಕ್ರಿಯೆಯಲ್ಲಿ ಆ್ಯಪ್ಟಿಟ್ಯೂಡ್ ಪರೀಕ್ಷೆ, ಪ್ರಬಂಧ ರಚನೆ, ಟೈಪಿಂಗ್ ಸಂದರ್ಶನ ನಡೆಸಲಾಗುವುದು. ಆಸಕ್ತರು - https://forms.gle/nM29Z3fRjbdqeo3R7 - ಈ ಲಿಂಕ್‌ನಲ್ಲಿ ನೋಂದಣಿ ಮಾಡಿ ಕೊಳ್ಳಬಹುದು. ಈಗಾಗಲೇ ಕಂಪೆನಿಯಲ್ಲಿ ೨೫೦೦ರಷ್ಟು ವೃತ್ತಿಪರರು ಕಾರ್ಯ ನಿರ್ವಹಿಸುತ್ತಿದ್ದು ಕಂಪೆನಿಗೆ ಆಯ್ಕೆಯಾಗಲು ಇದು ಉತ್ತಮ ಅವಕಾಶವಾಗಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಉಮೇಶ್ ಪೈ (ಮೊಬೈಲ್ ಸಂಖ್ಯೆ: 9480265511) ಇವರನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News