ಜ.18ರಂದು ವಿಶೇಷ ಮಕ್ಕಳ ಉಡುಪಿ ಜಿಲ್ಲಾಮಟ್ಟದ ಹೆಜ್ಜೆ ಸಂಭ್ರಮ

Update: 2025-01-16 16:57 GMT

ಉಡುಪಿ, ಜ.16: ಫಸ್ಟ್ ಸ್ಟೆಪ್ ನೃತ್ಯ ತರಬೇತಿ ಕೇಂದ್ರ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಕಾರದೊಂದಿಗೆ ವಿಶೇಷ ಮಕ್ಕಳ ಪ್ರತಿಭೆಗಳ ಅನಾವರಣಕ್ಕಾಗಿ ಮೂರನೇ ವರ್ಷದ ಜಿಲ್ಲಾಮಟ್ಟದ ಹೆಜ್ಜೆ ಸಂಭ್ರಮ ನೃತ್ಯ ರೂಪಕವನ್ನು ಜ.18ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕಿ ಅಕ್ಷತಾ ರಾವ್, ಜಿಲ್ಲೆಯ ಎಲ್ಲಾ ವಿಶೇಷ ಶಾಲೆಯ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 16 ವಿಶೇಷ ಶಾಲೆಗಳ ಮಕ್ಕಳು ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರತಿ ಶಾಲೆಯಿಂದ ಒಂದು ಮಗುವನ್ನು ಉತ್ತಮ ಬೆಳವಣಿಗೆ ಹೊಂದಿದ ಮಗು ಎಂದು ಗುರುತಿಸಿ, ಮಗುವಿಗೆ ಬೆಸ್ಟ್ ಡೆವೆಲಪ್ ಔಟ್ ಸ್ಟಾಡಿಂಗ್ ಚೈಲ್ಡ್ ಪುರಸ್ಕಾರ ನೀಡಲಾಗುವುದು ಎಂದರು.

ಪ್ರಥಮ ಬಹುಮಾನ 22,201ರೂ., ದ್ವಿತೀಯ 16,201ರೂ., ತೃತೀಯ 11,201ರೂ. ಮತ್ತು ಸಮಧಾನಕಾರ ಬಹುಮಾನ ನೀಡಲಾಗುವುದು. ವಿಶೇಷ ಮಕ್ಕಳಿಂದ ಬದುಕು ಬದಲಾಯಿಸುವ ಯಶೋಗಾಥೆಯ ಕಥಾ ನೃತ್ಯರೂಪಕ ಪ್ರದರ್ಶಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಪ್ರಮುಖರಾದ ಸಂಧ್ಯಾ ರಮೇಶ್, ದಿನೇಶ್ ಅಮೀನ್, ಆನಂದ್ ಸುವರ್ಣ, ನಿಲೇಶ್ ಕಾಂಚನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News