ಅ.20: ಕುಂದಾಪುರದಲ್ಲಿ ಸಾರಿಗೆ ಕಾರ್ಮಿಕರ ಬೃಹತ್ ಸಮಾವೇಶ

Update: 2024-10-17 16:07 GMT

ಕುಂದಾಪುರ, ಅ.17: ರಾಜ್ಯ ಸರಕಾರ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಘೋಷಿಸಿರುವ ಹಲ ವಾರು ಸೌಲಭ್ಯಗಳನ್ನು ಪಡೆಯಲು ಸಾರಿಗೆ ಕಾರ್ಮಿಕರ ಕಾರ್ಡ್ ಪಡೆಯಲು ಮಾಹಿತಿ ಕೊಡುವ ಸಮಾವೇಶ ಅ.20 ರಂದು ಬೆಳಿಗ್ಗೆ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆಸಲು ಸಿಐಟಿಯು ಸಂಚಲನ ಸಮಿತಿ ನಿರ್ಧರಿಸಿದೆ.

ಸಾರಿಗೆ ಕಾರ್ಮಿಕರಿಗೆ ಪಿಂಚಣಿ, ಅಫಘಾತ ಪರಿಹಾರ, ವೈದ್ಯಕೀಯ ಸೌಲಭ್ಯ, ಸಾರಿಗೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮುಂತಾದ ಸೌಲಭ್ಯಗಳನ್ನು ಪಡೆಯಲು ಮಂಡಳಿಗೆ ನೋಂದಾಯಿಸಿ ಅವರ ಕುಟುಂಬ ಗಳಿಗೆ ಭದ್ರತೆ ಒದಗಿಸಲು ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.

ಅಂಬೇಡ್ಕರ್ ಸಹಾಯಹಸ್ತ ನೋಂದಣಿ: ಕಾರ್ಮಿಕ ಇಲಾಖೆಯು ಹಮಾಲರು, ಟೈಲರ್‌ಗಳು, ಅಗಸರು, ಹೋಟೇಲ್ ಕಾರ್ಮಿಕರು, ಫೋಟೋಗ್ರಾಫರ್, ಕಲ್ಯಾಣ ಮಂಟಪದಲ್ಲಿ ದುಡಿಯುವ ಕೆಲಸಗಾರರು, ಬೀದಿ ಬದಿ ವ್ಯಾಪಾರಸ್ಥರು, ದಿನಪತ್ರಿಕೆ ವಿತರಕರು, ಮನೆಗೆಲಸಗಾರರು ಮುಂತಾದವರಿಗೆ ‘ಅಂಬೇಡ್ಕರ್ ಸಹಾಯಹಸ್ತ’ ಎಂಬ ಹೆಸರಿನಲ್ಲಿ ನೋಂದಣಿ ಮಾಡಿ ಕಾರ್ಮಿಕ ಕಾರ್ಡ್ ಪಡೆಯಲು ಮಾಹಿತಿ ಇದೇ ಸಂದರ್ಭದಲ್ಲಿ ನೀಡಲಾಗುತ್ತದೆ.

ಆದುದರಿಂದ ಈ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ಈ ಸಮಾವೇಶದಲ್ಲಿ ಪಾಲ್ಗೊಂಡು ಸರಕಾರದ ಸೌಲಭ್ಯ ಗಳನ್ನು ಪಡೆಯಬೇಕು ಎಂದು ಸಿಐಟಿಯು ಸಂಚಲನ ಸಮಿತಿ ಸಂಚಾಲಕರಾದ ಚಂದ್ರಶೇಖರ ವಿ., ಕೆಲಸಗಾರರ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾ ಮುಖಂಡರಾದ ಎಚ್.ನರಸಿಂಹ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News